ಜಿಲ್ಲೆ

ವಚನ ಶ್ರಾವಣ ಮಂಗಲೋತ್ಸವ

Dharwada - Basavaraj Idli

ಹುಬ್ಬಳ್ಳಿ: ಶ್ರಾವಣ ತಿಂಗಳ ಪರ್ಯಂತ ನಡೆದ ಬಸವ ಕೇಂದ್ರದ ವಚನ ಶ್ರಾವಣ ಮಂಗಲೋತ್ಸವ ಇಲ್ಲಿಯ ಗೋಕುಲ ರಸ್ತೆ ಮುರಾರ್ಜಿನಗರ 2ನೇ ಹಂತ, ವಿ.ಎಂ. ಕೊಟಗಿ ಬಸವ ಸಂಸತಿ ಶಾಲೆಯಲ್ಲಿ ಸೆ. 1ರಂದು ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.

ಇಳಕಲ್ ವಿಜಯಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗಾವಿ ಕೆಎಲ್ಇ ಸಂಸ್ಥೆಯ ಜೆ.ಎನ್. ವೈದ್ಯಕಿಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅವಿನಾಶ ಕವಿ ಅವರು ದೇಶಿಕೇಂದ್ರ ಸಂಗನಬಸವಯ್ಯ ಅವರ ವಚನವಿಲ್ಲದ ಕ್ರಿಯೆ ಆಚಾರಕ್ಕೆ ದೂರ ಕುರಿತು ಅನುಭಾವ ನೀಡುವರು.

ಶಾಸಕ ಅರವಿಂದ ಬೆಲ್ಲದ ಅತಿಥಿಗಳಾಗಿ ಭಾಗವಹಿಸುವರು. ಬಸವ ಕೇಂದ್ರದ ಅಧ್ಯ ಪ್ರೊ. ಜಿ.ಬಿ. ಹಳ್ಯಾಳ ಅಧ್ಯಕ್ಷತೆ ವಹಿಸುವರು.

ವಚನ ಶ್ರಾವಣ ಕಾರ್ಯಕ್ರಮದ ಸಂಚಾಲಕರಾದ ಬಿ.ಎಲ್. ಲಿಂಗಶೆಟ್ಟರ, ದಾಾಯಣಿ ಕೋಳಿವಾಡ, ಎಂ.ಬಿ. ಕಟ್ಟಿಯವರ ಉಪಸ್ಥಿತರಿರುವರು ಎಂದು ಬಸವ ಪರಿಸರ ಸಂರಣಾ ಸಮಿತಿ ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ ತಿಳಿಸಿದ್ದಾರೆ.