ಜಿಲ್ಲೆ

ವಚನ ಗಾಯನ ಸ್ಪರ್ಧೆಗೆ ಆಹ್ವಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರ ವೀರಶೈವ ಸಮಾಜ ಸಂಘಟನಾ ಸಮಿತಿಯ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಮೇ- 5ರಂದು ಸಮಿತಿಯ ಸತ್ಯಾನ್ವೇಷಣ ಮಂದಿರದಲ್ಲಿ ವಚನ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಮಹಾನಗರ ವ್ಯಾಪ್ತಿಯ ರಹವಾಸಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಯಾವುದೇ ಪ್ರವೇಶ ಶುಲ್ಕ ಇರುವದಿಲ್ಲ. ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ಪ್ರತಿ ವಿಭಾಗಕ್ಕೆ ಪ್ರಶಸ್ತಿ ನೀಡಲಾಗುವುದು. ಆಸಕ್ತರು ಮೇ-2ರ ಒಳಗಾಗಿ ಹೆಸರು ನೋಂದಾಯಿಸಲು ಕೋರಲಾಗಿದೆ.

ವೀರಶೈವ ಸಮುದಾಯ ಭವನ, ಬಸವೇಶ್ವರ ಸರ್ಕಲ್, ನವನಗರ, ಹುಬ್ಬಳ್ಳಿ ಈ ವಿಳಾಸಕ್ಕೆ ಸಂಪಕಿರ್ಸಲು ಸಮಿತಿಯ ಅಧ್ಯಕ್ಷ ಅನಿಲಕುಮಾರ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.