ಕೂಡ್ಲಿಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮಕ್ಕೆ ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ. ಪಿ.ಎನ್. ರವಿಕುಮಾರ್, ಹಿರಿಯ ಮೇಲ್ವಿಚಾರಕ ಜಗದೀಶ್ ನಾಯ್ಕ, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ್ ಆಸ್ಪತ್ರೆ ಸಿಬ್ಬಂದಿ ನಾಗರತ್ನಾ ಇತರರಿದ್ದರು. 
ಜಿಲ್ಲೆ

ಲಸಿಕೆ ಅಭಿಯಾನ ಯಶಸ್ಸಿಗೆ ಶ್ರಮಿಸಿ

ಕೂಡ್ಲಿಗಿ: ಪಾಲಕರು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಎಲ್ಲ ಲಸಿಕೆಗಳನ್ನು ತಪ್ಪದೆ ಹಾಕಿಸಿ ಸಂಭವನೀಯ ರೋಗಗಳಿಂದ ಮುಕ್ತಗೊಳಿಸಬೇಕು ಎಂದು ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಹೇಳಿದರು.

ಇಂದ್ರಧನುಷ್ ಲಸಿಕಾ ಕಾರ್ಯಕ್ರಮ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮಕ್ಕೆ
ಸೋಮವಾರ ಚಾಲನೆ ನೀಡಿ ಮಾತಾನಾಡಿದರು.

ದಡಾರ-ರುಬೆಲ್ಲಾ ನಿರ್ಮೂಲನೆಯತ್ತ ದೊಡ್ಡ ಹೆಜ್ಜೆ ಇಡಲಾಗಿದೆ. ಒಟ್ಟಾರೆ ಮಕ್ಕಳನ್ನು ಬಾಧಿಸುವ 12 ರೋಗ ನಿಯಂತ್ರಣಕ್ಕೆ ಲಸಿಕೆ ಪೂರಕವಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ವಿದ್ಯಾವಂತ ಸಮುದಾಯ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಅಭಿಯಾನ ಯಶಸ್ಸಿಗೆ ಶ್ರಮಿಸಬೇಕು ಎಂದರು.


ಬಸ್ ಹಾಗೂ ರೈಲು ನಿಲ್ದಾಣ, ಹಿಂದುಳಿದ ಬಡಾವಣೆಗಳು, ಕೊಳಚೆ ಪ್ರದೇಶ, ವಲಸೆ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿನ ಮಕ್ಕಳು ಹಾಗೂ ಅರ್ಹ ಮಹಿಳೆಯರಿಗೆ ಲಸಿಕೆ ನೀಡಲಾಗುವುದು ಎಂದರು.

ಎಲುಬು ಮತ್ತು ಕೀಲು ತಜ್ಞ ಡಾ. ಪಿ.ಎನ್. ರವಿಕುಮಾರ್, ಹಿರಿಯ ಮೇಲ್ವಿಚಾರಕ ಜಗದೀಶ ನಾಯ್ಕ, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ್ ಆಸ್ಪತ್ರೆ ಸಿಬ್ಬಂದಿ ನಾಗರತ್ನ, ನೀಲಮ್ಮ, ಪ್ರಕಾಶ, ಕಾರ್ತಿಕ, ಗುರುಬಸವರಾಜ, ಸೋಮಶೇಖರ ಇತರರಿದ್ದರು.