ಜಿಲ್ಲೆ

ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಜಾಗೃತಿ

ಕಿರಣ್ ಗೌಡ.ಜಿ

ಸೋಮವಾರಪೇಟೆ: ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆ ವತಿಯಿಂದ ವಿಶ್ವ ಲಸಿಕಾ ವಾರದ ಕಾರ್ಯಕ್ರಮವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಜಮೀರ್ ಆಹಮ್ಮದ್ ಗುರುವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಲಸಿಕೆಯು ಮಕ್ಕಳನ್ನು 30 ಮಾರಕ ರೋಗಗಳಿಂದ ರಕ್ಷಿಸಲ್ಪಡುತ್ತದೆ. ಲಸಿಕೆ ನೀಡುತ್ತಿರುವುದರಿಂದ 1974ರಿಂದಲೂ ಪ್ರತಿ ನಿಮಿಷಕ್ಕೆ ಆರು ಮಕ್ಕಳನ್ನು ರಕ್ಷಿಸಲಾಗುತ್ತಿದೆ. 2023 ರ ವರದಿಯ ಪ್ರಕಾರ ಪ್ರಪಂಚದಾದ್ಯಂತ 22 ಮಿಲಿಯನ್ ಮಕ್ಕಳು ಮೊದಲ ದಡಾರ ಲಸಿಕೆಯಿಂದ ವಂಚಿತರಾಗಿದ್ದಾರೆ. ಏ.24 ರಿಂದ 30ರವರೆಗೆ ವಿಶ್ವ ಲಸಿಕಾ ವಾರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಅವರು ಮಾತನಾಡಿ, ಏ.24 ರಿಂದ 30 ರವರೆಗೆ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಉಚಿತ ವಿಶೇಷ ಲಸಿಕೆಯನ್ನು ಹಾಕಲಾಗುತ್ತಿದೆ. ಪಾಲಕರು ಹೆಚ್ಚಿನ ಆಸಕ್ತಿ ವಹಿಸಿ ಸ್ವಯಂ ಪ್ರೇರಿತರಾಗಿ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸಿ ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೆಟ್ರನ್ ವಸಂತಿ, ದಾದಿಯರಾದ ವಿಶ್ವಜ್ಞ, ರಾಧಿಕಾ ಅನಿತಾ ಇದ್ದರು.