ಜಿಲ್ಲೆ

ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸಿ

ಎನ್.ವೆಂಕಟೇಶ್

ಬಾಗೇಪಲ್ಲಿ: ಪ್ರಾಣಿಗಳಿಂದ ಮನಷ್ಯನಿಗೆ ಹರಡುವ ರೇಬೀಸ್​ ತಡೆಗುಟ್ಟುವಲ್ಲಿ ಪರಿಣಾಮಕಾರಿ ಪಾತ್ರವಹಿಸಲಿರುವ ರೇಬೀಸ್​ ನಿರೋಧಕ ಲಸಿಕೆಯನ್ನು ನಾಯಿ, ಬೆಕ್ಕು ಸೇರಿ ಇತರ ಸಾಕು ಪ್ರಾಣಿಗಳಿಗೆ ಕಡ್ಡಾಯವಾಗಿ ಹಾಕಿಸಿ ಕಾಯಿಲೆ ತಡೆಗಟ್ಟಿ ಎಂದು ಪಶುಪಾಲನಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ತಿಳಿಸಿದರು. ಬಾಗೇಪಲ್ಲಿಯ ಪಶು ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಸಂಶೋಧನೆ ಪ್ರಕಾರ ರೇಬೀಸ್​ ಕಾಯಿಲೆಯ ಸಾವುಗಳಿಗೆ ನಾಯಿಗಳು ಮೂಲವಾಗಿವೆ. ರೇಬೀಸ್​ ಕಾಯಿಲೆಯಿಂದ ಮನುಷ್ಯನ ಮತ್ತು ಪ್ರಾಣಿಗಳ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರೇಬೀಸ್​ ಕಾಯಿಲೆ ತಡೆಗಟ್ಟುವುದು ನಮ್ಮೆಲ್ಲರ ಹೊಣೆ. ವಿಶ್ವ ರೇಬೀಸ್​ ದಿನಾಚರಣೆ ಪ್ರಯುಕ್ತ ಸೆ.28ರಂದು ತಾಲೂಕು ಪಶು ಆಸ್ಪತ್ರೆಯಲ್ಲಿ ನಾಯಿ, ಬೆಕ್ಕುಗಳಿಗೆ ಉಚಿತ ರೇಬೀಸ್​ ಲಸಿಕೆ ನೀಡುವ ನೀಡಲಾಗುತ್ತಿದ್ದು, ಪಶುಪಾಲನಾ ಇಲಾಖೆಯ ಯೊಜನೆಯನ್ನು ಸದ್ಬಳಿಕೆ ಮಾಡಿಕೊಳ್ಳಿ ಎಂದರು.