ಜಿಲ್ಲೆ

ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಿ

ಸೋಮನಾಥ ರೆಡ್ಡಿ

ನರಗುಂದ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಜರುಗುವ 4ನೇ ಸುತ್ತಿನ ಕಾಲುಬಾಯಿ ಲಸಿಕಾ ವಿತರಣೆ ಕಾರ್ಯಕ್ರಮಕ್ಕೆ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಪಶು ವೈದ್ಯಕೀಯ ಪರೀಕ್ಷಕ ವೈ.ಎಸ್. ಚಂದ್ರಗಿರಿ ಮಾತನಾಡಿ, ಚಿಕ್ಕನರಗುಂದದ ವ್ಯಾಪ್ತಿಯ 6 ವಿವಿಧ ಹಳ್ಳಿಗಳ 3572 ಜಾನುವಾರುಗಳಿಗೆ 30 ದಿನಗಳಲ್ಲಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.

ಚಿಕ್ಕನರಗುಂದ ಗ್ರಾಪಂ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ಪಶು ಆಸ್ಪತ್ರೆಯ ಸಿಬ್ಬಂದಿಯು ಚಿಕ್ಕನರಗುಂದ, ಬೆನಕನಕೊಪ್ಪ, ಸಂಕಧಾಳ, ಅರಿಷಿನಗೋಡಿ, ಹಿರೇಕೊಪ್ಪ, ಕುರಗೋವಿನಕೊಪ್ಪ ಗ್ರಾಮಕ್ಕೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕುವರು. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಶಿವಾನಂದ ಬಾಚಿ, ಮಂಜುನಾಥ ಹೂಲಿ, ಮಲ್ಲು ಹೊಸ ಗಾಣಿಗೇರ, ಶಿವು ಮೇಟಿ, ಚನ್ನಪ್ಪ ಹಡಪದ ಇತರರಿದ್ದರು.