ಜಿಲ್ಲೆ

ಕಸ ಸಂಗ್ರಹಿಸುತ್ತಿದ್ದಾಕೆಗೆ ಒಲಿದು ಬಂದ ಉಪಾಧ್ಯಕ್ಷೆ ಹುದ್ದೆ*

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ವಿವಿಧೆಡೆ ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ -ಕಾಯಕವನ್ನು ನಿರ್ವಹಿಸುತ್ತಿದ್ದ ಶಾಂತಿನಗರದ ರಾಣಿಯಮ್ಮ ಸಚಿವ ಡಾ ಎಂ.ಸಿ.ಸುಧಾಕರ್ ಬೆಂಬಲಿತರಾಗಿ ನಗರಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

ಚಿಂತಾಮಣಿ ನಗರಸಭೆಯ ಉಪಾಧ್ಯಕ್ಷೆ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು ಸಚಿವ ಸುಧಾಕರ್ ಬಣದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ರೇಖಾ ಉಮೇಶ್ ಹಾಗೂ ರಾಣಿಯಮ್ಮರಿಗೆ ಮಾತ್ರ ಅವಕಾಶವಿದ್ದು ಈ ಹಿನ್ನೆಲೆಯಲ್ಲಿ ರಾಣಿಯಮ್ಮರಿಗೆ ಉಪಾಧ್ಯಕ್ಷೆ ಹುದ್ದೆ ಒಲಿದು ಬಂದಿದೆ.

ಈ ಬಗ್ಗೆ ಮಾತನಾಡಿದ ರಾಣಿಯಮ್ಮ, ನಾನು ಮನೆ-ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕೆಲಸದಲ್ಲಿ ಇದ್ದೆ ಕಳೆದ ನಗರಸಭಾ ಚುನಾವಣೆಯಲ್ಲಿ ಸಚಿವರಾದ ಡಾ.ಎಂ.ಸಿ ಸುಧಾಕರ್ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರು. ನನ್ನ ವಾರ್ಡಿನ ಜನತೆ ನನ್ನ ಕೈ ಹಿಡಿದು ಚುನಾವಣೆಯಲ್ಲಿ ಗೆಲ್ಲಿಸಿದ್ದರ ಫಲವಾಗಿ ನಾನು ಇಂದು ಉಪಾಧ್ಯಕ್ಷೆಯಾಗಿದ್ದು ನನ್ನಂತಹವರನ್ನು ಇಂತಹ ಹುದ್ದೆಗೆ ಆಯ್ಕೆ ಮಾಡಿದ ಸಚಿವರು ಹಾಗೂ ನನ್ನನ್ನು ಆಯ್ಕೆ ಮಾಡಿದ್ದ ವಾರ್ಡಿನ ಜನತೆಗೆ ಸದಾ ಚಿರಋಣಿಯಾಗಿರುತ್ತೇನೆಂದರು.