ಶಹಾಬಾದ್ ತಾಲೂಕಿನ ರಾವೂರಿನಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆಯಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ದಲಿಂಗ ಬಾಳಿ, ವಿದ್ಯಾಧರ ಖಂಡಾಳ, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಈಶ್ವರಗೌಡ ಪಾಟೀಲï, ಶಿವಕುಮಾರï ಸರಡಗಿ ಇತರರಿದ್ದರು. 
ಜಿಲ್ಲೆ

ವಚನ ಸಂರಕ್ಷಕ ಡಾ.ಫ.ಗು.ಹಳಕಟ್ಟಿ

ಶಹಾಬಾದ್: ಹನ್ನೆರಡನೇ ಶತಮಾನದ ಶ್ರೇಷ್ಠ ಸಾಹಿತ್ಯವಾದ ವಚನ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿ, ಸಾಕಷ್ಟು ವಚನಗಳನ್ನು ಸಂರಕ್ಷಿಸಿದ ಕೀರ್ತಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಇಂದು ನಾವೆಲ್ಲರೂ ವಚನಗಳು ಓದುವುದು ಹಾಗೂ ಅಧ್ಯಯನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಡಾ.ಹಳಕಟ್ಟಿ ಅವರ ಶ್ರಮವೇ ಕಾರಣ ಎಂದರು.

ದೀಪ ತಾನು ಉರಿದು ಸುತ್ತಲೂ ಸುಗಂಧ ಸೂಸುವಂತೆ ಹಳಕಟ್ಟಿ ಅವರು ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ, ವಚನ ಸಾಹಿತ್ಯ ಉಳಿಸಲು ದುಡಿದಿದ್ದಾರೆ. ಅವರ ಸೇವೆ ಸದಾ ಸ್ಮರಣೀಯ. ಇಂದಿನ ಯುವಜನತೆ ಹಳಕಟ್ಟಿ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಿಕ್ಷಕ ಶಿವಾನಂದ ಡೋಮನಾಳ ಮಾತನಾಡಿದರು. ಶಿಕ್ಷಕರಾದ ವಿದ್ಯಾಧರ ಖಂಡಾಳ, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಈಶ್ವರಗೌಡ ಪಾಟೀಲ್, ಶಿವಕುಮಾರ ಸರಡಗಿ, ಈರಣ್ಣ ಹಳ್ಳಿ, ಕಾವೇರಿ ಮಡಿವಾಳ, ಭೀಮಾಶಂಕರ ಬಮ್ಮನಳ್ಳಿ, ಸುಭಾಷ ಚವ್ಹಾಣ್, ರಾಜು ಅಳ್ಳೊಳ್ಳಿ, ಅನುಸೂಯ ಹೂಗಾರ ಇತರರಿದ್ದರು.

ವಚನ ಕಂಠಪಾಠ ಸ್ಪರ್ಧೆಯಲ್ಲಿ ಅತಿ ಹೆಚ್ಚು ವಚನಗಳನ್ನು ಹೇಳಿದ ಕಾರ್ತಿಕ್, ಸೋಮಶೇಖರ, ಶರಣ್, ಅಕ್ಷರ, ಭಾಗ್ಯಶ್ರೀ, ಬಸವರಾಜ, ಹರ್ಷಿತ್, ದಿವ್ಯಶ್ರೀ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಿದ್ದಲಿಂಗ ಬಾಳಿ ನಿರೂಪಣೆ ಮಾಡಿ ವಂದಿಸಿದರು.