ಜಿಲ್ಲೆ

ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಆಗಸ್ಟ್ 1ರಂದು

Dharwada - Santosh Vaidya

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆ. 1ರಂದು ಸಂಜೆ 5.30 ಗಂಟೆಗೆ ನಗರದ ಗೋಕುಲ ರಸ್ತೆಯಲ್ಲಿನ ಕ್ಯೂಬಿಕ್ಸ್ ಹೋಟೆಲ್​ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕೆಟಿಜಿ ಗ್ರುಪ್ ಆಫ್ ಕಂಪನಿಯ ಜೈರಾಮ್ ಕಿಮ್ಮನೆ, ಬೆಳಗಾವಿಯ ಓರಿಯನ್ ಹೈಡ್ರಾಲಿಕ್ಸ್ ಪ್ರೖೆವೇಟ್ ಲಿಮಿಟೆಡ್​ನ ಕೀತ್ ಮಚಾಡೊ, ಹುಬ್ಬಳ್ಳಿಯ ಆನಂದ ಕಮತಗಿ, ಮೆ. ಎಕ್ಸೀಡ್ ಕ್ರಾಪ್ ಸೈನ್ಸ್ ಪ್ರೖೆ.ಲಿ.ನ ಚಂದ್ರಶೇಖರ ಬಾಗೇವಾಡಿ, ಬಳ್ಳಾರಿಯ ಶ್ರೀ ಸಾಯಿ ಗಣೇಶ ಕಾಟನ್ ಮಿಲ್​ನ ಪಿ. ದೊಡ್ಡ ಬಸವನಗೌಡ ಹಾಗೂ ರಾಣೇಬೆನ್ನೂರಿನ ವಿಭಾ ಫ್ಯಾಶನ್​ವೇರ್​ನ ಹೇಮಲತಾ ಯಡಕಿ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ವಿತರಿಸಲಾಗುವುದು ಎಂದರು.

ಹುಬ್ಬಳ್ಳಿಯ ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಪ್ರೖೆ. ಲಿಮಿಟೆಡ್​ನ ಶೇಖರ ಬಸಣ್ಣ-ರೋಹಿಣಿ ಘಟಪಾಂಡೆ ಮತ್ತು ಆಸ್ಟ್ರ ಡಿಫೆನ್ಸ್​ನ ಅಂಕುಶ ಕೊರವಿ ಅವರಿಗೆ ನವೋದ್ಯಮಿ ಪ್ರಶಸ್ತಿ ನೀಡಲಾಗುತ್ತದೆ. ಮಹಿಕೋ ಪ್ರೖೆ.ಲಿಮಿಟೆಡ್​ನ ಚೇರಮನ್ ರಾಜೇಂದ್ರ ಬರವಾಲೆ, ಜೈರಾಮ್ ಕಿಮ್ಮನೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ಸಂಶಿಮಠ, ಪ್ರಧಾನ ಕಾರ್ಯದರ್ಶಿ ಪ್ರವೀಣ ಅಗಡಿ, ಸಂಸ್ಥಾಪಕರ ದಿನಾಚರಣೆ ಚೇರ್ಮನ್ ದೀಪಕ ಪಾಟೀಲ, ಇತರರು ಇದ್ದರು.