ಜಿಲ್ಲೆ

ಅಧ್ಯಕ್ಷರಾಗಿ ವಿ.ನಿತಿನ್ ಆಯ್ಕೆ

ಬೈಲಕುಪ್ಪೆ: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪಿರಿಯಾಪಟ್ಟಣ ತಾಲೂಕಿಗೆ ಅಧ್ಯಕ್ಷರಾಗಿ ವಿ.ನಿತಿನ್ ಅವರನ್ನು ಆಯ್ಕೆ ಮಾಡಲಾಗಿದೆ.

ವಿ.ನಿತಿನ್

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನಿರ್ದೇಶನದ ಮೇರೆಗೆ ಹೋಬಳಿ ಮಟ್ಟದ ಸಮಿತಿಯ ಸದಸ್ಯರನ್ನಾಗಿ ಬೆಣಗಲ್ ಧನರಾಜ್, ಮುತ್ತೂರು ನಿರೂಪಾರಾಜೇಶ್, ಆವರ್ತಿ ವಿಂದ್ಯಾಶ್ರೀ ಧರ್ಮ, ಬಿ.ಟಿ.ಕೊಪ್ಪಲು ಕೃಷ್ಣೆಗೌಡ, ಬೆಟ್ಟದಪುರ ರವಿ, ಅಬಟೂರು ರಘು, ಹಲಗನಹಳ್ಳಿ ಅಸ್ಲಂ ಪಾಷ, ರಾವಂದೂರು ವಿಜಯಕುಮಾರ್, ನವಿಲೂರು ಮಹದೇವ, ಆಯಿತನಹಳ್ಳಿ ಮಹದೇವ, ಸುಂಡವಾಳು ಕುಮಾರ್, ಚಪ್ಪರದಹಳ್ಳಿ ಸಿ.ಜೆ.ರವಿ, ಹಂಡಿತವಳ್ಳಿ ಕುಮಾರ್, ಪುನಾಡಹಳ್ಳಿ ರವೀಂದ್ರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.