ಜಿಲ್ಲೆ

ಮಹಾಮಂಡಳದ ವಿ ಚಂದ್ರಿಕಾ ಪುಸ್ತಕ ಬಿಡುಗಡೆ

Dharwada - Basavaraj Idli

ಹುಬ್ಬಳ್ಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಮೂರುಸಾವಿರ ಮಠದ ಸಭಾಭವನದಲ್ಲಿ ಬುಧವಾರ ವಿ- ಚಂದ್ರಿಕಾ ಪುಸ್ತಕ ಬಿಡುಗಡೆ ಮಾಡಲಾಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ವೀಣಾ ಹೆಗಡೆ ಅವರು, ಹುಬ್ಬಳ್ಳಿಯ ಗಣೇಶೋತ್ಸವವು ಯಾವುದೇ ಜಾತಿ, ಮತ, ಪಂಥ ಎನ್ನದೆ ಹಾಗೂ ಮೇಲು& ಕೀಳು ಎಂಬ ಭಾವನೆ ಇಲ್ಲದೆ ಸಹೋದರತ್ವ ಭಾವನೆಯಿಂದ ಆಚರಿಸುತ್ತ ಬರಲಾಗಿದೆ. ರಾಜ್ಯದಲ್ಲಿ ಈ ಉತ್ಸವವು ಹೆಸರು ಪಡೆದಿದೆ. ಮಹಾಮಂಡಳವು ವಿ ಚಂದ್ರಿಕಾ ಎಂಬ ಪುಸ್ತಕದಿಂದ ಒಳ್ಳೆಯ ವಿಚಾರ ಹಾಗೂ ಸಾಹಿತ್ಯ ಕುರಿತು ಯುವ ಜನರಲ್ಲಿ ಆಸಕ್ತಿ ಮೂಡಿಸುತ್ತಿದೆ ಎಂದರು.

ನ್ಯಾಯವಾದಿ ಸವಿತಾ ಚಂದನಮಟ್ಟಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತಹ ಒಂದು ಸುವರ್ಣ ಅವಕಾಶ ಈ ಗಣೇಶ ಹಬ್ಬವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿ-ಚಂದ್ರಿಕಾ ಸಂಪಾದಕಿ ಸರಸ್ವತಿ ಮೆಹರವಾಡೆ ಮಾತನಾಡಿ, ಈ ಪುಸ್ತಕದಲ್ಲಿ ಜನರಿಗೆ ಅವಶ್ಯ ಇರುವಂತಹ ಮಾಹಿತಿ, ವಿಚಾರಗಳು ದೊರೆಯುತ್ತವೆ ಎಂದರು.

ಅಕ್ಕಮ್ಮ ಕಂಬಳಿ, ಸ್ಮಿತಾ ಸಂಕಣ್ಣವರ, ರೇಖಾ ಆಪ್ಟೆ, ರತ್ನಾ ಬಸಾಪುರ, ಪುಷ್ಪಾ ಹಿತ್ತಾಳೆ, ಸಂಗೀತಾ ಜಡಿ, ವಿಜಯಲಕ್ಷ್ಮಿ ಹಿರೇಮಠ, ಗಾಯತ್ರಿ ಕೊಂಗಿ, ಸುಧಾ ಮಲ್ಲಾಪುರ, ಸಂಗೀತಾ ದೇವದಾಸ, ಗಾಯತ್ರಿ ನೆಲ್ಲಿಕೊಪ್ಪ, ಡಾ. ಮಂಜುಳಾ ಕಮ್ಮಾರ, ಗೀತಾ ದಿವಟೆ ಇತರರು ಪಾಲ್ಗೊಂಡಿದ್ದರು.

ಅನಿತಾ ಜಡಿ ಸ್ವಾಗತಿಸಿದರು, ಸಾಧನಾ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ರೂಪಾ ಅಂಗಡಿ ವಂದಿಸಿದರು.