ಜಿಲ್ಲೆ

ವಿ.ಎ.ಕೆ. ಫೌಂಡೇಶನ್​ನಿಂದ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿ ವಿತರಣೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಿ.ಎ.ಕೆ. ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲೆಯ ಬ್ಯಾಗ್, ಪುಸ್ತಕ ಹಾಗೂ ಪರೀಕ್ಷೆಯ ಕಿಟ್​ಗಳನ್ನು ಇಲ್ಲಿನ ಬೈರಿದೇವರಕೊಪ್ಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ನಗರದ ಸೇವಕ ಅಸಂಘಟಿತ ಕಾರ್ವಿುಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತೇಜಸ್ಸು ಕಟ್ಟಡ ಮತ್ತು ಇತರೆ ನಿಮಾಣ ಕಾರ್ವಿುಕರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೈಕೋರ್ಟ್ ವಕೀಲ ಅಶೋಕ ಬಡಿಗೇರ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಧಾರ್ವಿುಕ ಹಾಗೂ ಇನ್ನಿತ್ತರ ಎಲ್ಲ ಕ್ಷೇತ್ರಗಳಲ್ಲಿ ವೆಂಕಟೇಶ ಕಾಟವೆ ಅವರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಬಡ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂಬ ಕಾರಣಕ್ಕಾಗಿ ಶಾಲಾ ಮಕ್ಕಳ್ಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ವಿ.ಎ.ಕೆ. ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಕಾಟವೆ, ಈಶ್ವರಿ ಫೌಂಡೇಶನ್ ಸಂಸ್ಥಾಪಕ ಸಂತೋಷ ವೆರ್ಣೆಕರ, ಸರ್ವಧರ್ಮ ಸಮಾಜ ಸೇವಕ ರಮೇಶ ಮಹದೇವಪ್ಪನವರ, ಸೇವಕ ಅಸಂಘಟಿತ ಕಾರ್ವಿುಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ ರಾಶಿಂಕರ್, ಬಿಜೆಪಿ ಹು-ಧಾ ಸೆಂಟ್ರಲ್ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪ್ರವೀಣ ಪವಾರ, ಉದ್ಯಮಿ ತುಷಾರ ಬದ್ದಿ, ರಮೇಶ ಕಳಸದ, ಶ್ಯಾಮಸುಂದರ ಉತ್ತರಕರ, ಚಿದಾನಂದ ಪಾಸ್ತೆ, ರಾಮಚಂದ್ರ ಹದಗಲ, ಡಾ. ಸುಭಾಷ ಬಬ್ರುವಾಡ, ಶಿವಶಂಕರ ಐಹೋಳಿ ಅತಿಥಿಗಳಾಗಿದ್ದರು.

ಇದೇ ಸಂದರ್ಭದಲ್ಲಿ ವೆಂಕಟೇಶ ಕಾಟವೆ ಅವರನ್ನು ಸನ್ಮಾನಿಸಲಾಯಿತು.

ಆನಂದ ಬಾಕಳೆ, ಸಚಿನ ಪೂಜಾರಿ, ಸಚಿನ ಕಾಟವೆ, ಶ್ರೀಧರ ಕಲಬುರ್ಗಿ, ಮಂಜು ಊಟವಾಲೆ, ಸಂತೋಷ ಕಾಟವೆ, ವಿನಾಯಕ ಮೆಹರವಾಡೆ ಹಾಗೂ ಇತರರು ಉಪಸ್ಥಿತರಿದ್ದರು.