ತಾಲೂಕಿನ ಕೆ.ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿಯ ದೊಡ್ಡ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಉಯ್ಯಲೆ ಸೇವೆ ನಡೆಯಿತು. 
ಜಿಲ್ಲೆ

ಶ್ರೀ ಕೆಂಚಾಂಬಿಕೆ ದೇವಿಗೆ ಉಯ್ಯಲೆ ಸೇವೆ

ಲೋಕೇಶ್ ಮನು. ಡಿ

ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಶ್ರೀ ಕೆಂಚಾಂಬಿಕೆ ದೇವಿಯ ದೊಡ್ಡ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಉಯ್ಯಲೆ ಸೇವೆ ಜರುಗಿತು.

ಉಯ್ಯಲೆ ಸೇವಾರ್ಥರಾದ ಶಾನುಭೋಗರ ವಂಶಸ್ಥರಾದ ಮಂಜುನಾಥ ಮೂರ್ತಿ ದಂಪತಿ, ಗೌಡರ ವಂಶದ ಶರತ್ ದಂಪತಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಡಿ.ಗೋಪಾಲ್, ಅರ್ಚಕ ರಾಮಸ್ವಾಮಿ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡರು. ನೂರಾರು ಭಕ್ತರು ದೇವರಿಗೆ ಹೂವು ಅರ್ಪಿಸಿ ಭಕ್ತಿ ಮೆರೆದರು. ಎಲ್ಲರಿಗೂ ತೀರ್ಥ ಪ್ರಸಾದ ವಿನಿಯೋಗ ನೆರವೇರಿತು.