ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಮರು ವಿಂಗಡನೆ ಮಾಡಿ ರಾಜ್ಯ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಅಂತಿಮ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆಯೇ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ಭಟ್ಕಳವನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿ, ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಜಿಪಂ ಕ್ಷೇತ್ರ ವ್ಯಾಪ್ತಿಯ ಕೆಲವು ಪ್ರದೇಶಗಳು ನಗರಸಭೆಗೆ ಸೇರ್ಪಡೆಯಾಗಿದ್ದವು. ಹಾಗಾಗಿ ಪರಿಷ್ಕರಣೆ ಮಾಡಿ ಅಂತಿಮ ಅಧಿಸೂಚನೆಯನ್ನು ಏ.23 ಕ್ಕೆ ಪ್ರಕಟಿಸಲಾಗಿದೆ. ಇದರಿಂದ ಉತ್ತರ ಕನ್ನಡ ಜಿಪಂ ಕ್ಷೇತ್ರಗಳ ಸಂಖ್ಯೆ ಕಳೆದ ಅಽಸೂಚನೆಯಲ್ಲಿ 54 ಇರುವುದು 53 ಕ್ಕೆ ಇಳಿಕೆಯಾಗಿದೆ. ಈ ಹಿಂದೆ ಎಂದರೆ 2015 ರಲ್ಲಿ ಉತ್ತರ ಕನ್ನಡ ಜಿಪಂನಲ್ಲಿ 39 ಕ್ಷೇತ್ರಗಳಿದ್ದವು. 2024 ರಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಶೇ.15 ರಷ್ಟು ಹೆಚ್ಚಿಸಲಾಗಿತ್ತು.
ಜೊಯಿಡಾ ತಾಲ್ಲೂಕಿನಲ್ಲಿ ರಾಮನಗರ, ಜೊಯಿಡಾ, ಜಗಲಬೇಟ. ದಾಂಡೇಲಿಯಲ್ಲಿ ಅಂಬಿಕಾ ನಗರ. ಹಳಿಯಾಳದಲ್ಲಿ ಮಂಗಳವಾಡ, ತೆರಗಾಂವ, ಗುಂಡೊಳ್ಳಿ, ಮುರ್ಕವಾಡ. ಕಾರವಾರದಲ್ಲಿ ಕಡವಾಡ, ಮುಡಗೇರಿ, ಮಲ್ಲಾಪುರ, ಚಿತ್ತಾಕುಲಾ, ಚೆಂಡಿಯಾ. ಯಲ್ಲಾಪುರದಲ್ಲಿ ಕಂಪ್ಲಿ, ಕಿರವತ್ತಿ. ಮುಂಡಗೋಡಿನಲ್ಲಿ ಮೈನಳ್ಳಿ, ಇಂದೂರ, ಪಾಳಾ, ಚಿಗಳ್ಳಿ. ಅಂಕೋಲಾದಲ್ಲಿ ಬೆಳಸೆ, ಭಾವಿಕೇರಿ, ಅಗಸೂರು, ಅವರ್ಸಾ, ಶೇಟಗೇರಿ. ಶಿರಸಿಯಲ್ಲಿ ಹುಲೇಕಲ್, ಸೋಂದಾ, ದೊಡ್ನಳ್ಳಿ, ಬದನಗೋಡ, ಬನವಾಸಿ, ಜಾನ್ಮನೆ. ಕುಮಟಾದಲ್ಲಿ ಮೂರೂರು, ಹೆಗಡೆ, ಮಿರ್ಜಾನ, ಗೋಕರ್ಣ, ದೇವಗಿರಿ, ಹೊಲನಗದ್ದೆ. ಸಿದ್ದಾಪುರದಲ್ಲಿ ಅಣಲೇಬೈಲ್, ಹಲಗೇರಿ, ದೊಡ್ಮನೆ, ಕಾನಗೋಡ. ಹೊನ್ನಾವರದಲ್ಲಿ ನಗರಬಸ್ತಿಕೇರಿ, ಹಳದೀಪುರ, ಮುಗ್ವಾ, ಮಾವಿನಕುರ್ವಾ, ಕಾಸರಕೋಡ, ಬಳಕೂರ. ಭಟ್ಕಳದಲ್ಲಿ ಮಾವಳ್ಳಿ-1, ಕಾಯ್ಕಿಣಿ, ಶಿರಾಲಿ, ಮುಟ್ಟಳ್ಳಿ, ಹೆಬಳೆ, ಬೆಳಕೆ ಕ್ಷೇತ್ರಗಳು ಇವೆ.