ಕಾರವಾರ: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ವರ್ಗವಾರು ಮೀಸಲಾತಿಯ ಅಂತಿಮ ಅಽಸೂಚನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದೆ. ಹಿಂದಿನ ಅಽಸೂಚನೆಯನ್ನು ರದ್ದು ಮಾಡಿರುವುದಾಗಿ ಆದೇಶದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಕೆ.ಎಚ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಕಾಯ್ದೆಯಂತೆ ಶೇ.50 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಆದರೆ, ಒಟ್ಟಾರೆ ಸದಸ್ಯ ಸ್ಥಾನಗಳು ಬೆಸ ಸಂಖ್ಯೆಯಲ್ಲಿರುತ್ತವೆ. ಮಹಿಳೆಯರಿ ಹೆಚ್ಚುವರಿ ಒಂದು ಸ್ಥಾನ ಲಭ್ಯವಾಗಿದೆ. ಉದಾಹರಣೆಗೆ ಜಿಲ್ಲೆಯ 8 ತಾಲೂಕು ಪಂಚಾಯಿತಿಗಳಿಗೆ 9 ಸದಸ್ಯ ಸ್ಥಾನಗಳು ನಿಗದಿಯಾಗಿವೆ. ಶೇ.50 ಎಂದರೆ 4.5 ಸ್ಥಾನಗಳಾಗಲಿವೆ. ಇದರಿಂದ ಮಹಿಳೆಯರಿಗೆ 5 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಮುಂಡಗೋಡ ಹೊರತುಪಡಿಸಿ ಉಳಿದ 11 ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ)ಗೆ ಒಂದೇ ಸ್ಥಾನಗಳು ಮೀಸಲಿವೆ. ಅವುಗಳು ಮಹಿಳೆಯರಿಗೆ ಮೀಸಲಾಗಿವೆ.
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಗೆ ಒಟ್ಟು 53 ಸದಸ್ಯ ಸ್ಥಾನಗಳು ನಿಗದಿಯಾಗಿದ್ದು, ಅದರಲ್ಲಿ 27 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಪರಿಶಿಷ್ಟ ಜಾತಿಗೆ 4 ಸ್ಥಾನಗಳು ಮೀಸಲಾಗಿದ್ದು, ಅದರಲ್ಲಿ 2 ಸ್ಥಾನಗಳು ಆ ವರ್ಗದ ಮಹಿಳೆಯರಿಗೆ ಮೀಸಲಾಗಿವೆ. ಪರಿಶಿಷ್ಟ ಪಂಗಡ ಮಹಿಳೆಗೆ -1 ಸ್ಥಾನ, ಹಿಂದುಳಿದ ವರ್ಗ `ಅ' ಕ್ಕೆ 14 ಸ್ಥಾನಗಳು ಮೀಸಲಾಗಿದ್ದು, ಅದರಲ್ಲಿ 7 ಅದೇ ವರ್ಗದ ಮಹಿಳೆಯರಿಗೆ, ಹಿಂದುಳಿದ ವರ್ಗ `ಬ' ಕ್ಕೆ 4 ಸ್ಥಾನಗಳು ಮೀಸಲಾಗಿದ್ದು, ಅದರಲ್ಲಿ 2 ಅದೇ ವರ್ಗದ ಮಹಿಳೆಗೆ ಮೀಸಲಾಗಿವೆ. ಸಾಮಾನ್ಯ ಮಹಿಳೆಗೆ 30 ಸ್ಥಾನಗಳು ಮೀಸಲಾಗಿದ್ದು, ಇನ್ನು 15 ಸ್ಥಾನಗಳು ಸಾಮಾನ್ಯಕ್ಕೆ ತೆರೆದುಕೊಂಡಿದೆ.
ಜಿಲ್ಲೆಯ 12 ತಾಲೂಕು ಪಂಚಾಯಿತಿಗಳಿಗೆ ಒಟ್ಟು 118 ಸ್ಥಾನಗಳಿದ್ದು, ಅದರಲ್ಲಿ 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಪರಿಶಿಷ್ಟ ಜಾತಿಗೆ ಮೀಸಲಿರುವ 13 ಸ್ಥಾನಗಳಲ್ಲಿ 12 ಮಹಿಳೆಯರಿಗೆ, ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ 12 ರಲ್ಲಿ ಎಲ್ಲ ಸ್ಥಾನಗಳೂ ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ `ಅ' ಕ್ಕೆ 25 ಸ್ಥಾನಗಳು ಮೀಸಲಾಗಿದ್ದು, ಅದರಲ್ಲಿ 13 ಅದೇ ವರ್ಗದ ಮಹಿಳೆಯರಿಗೆ ಮೀಸಲಿದೆ. ಹಿಂದುಳಿದ ವರ್ಗ `ಬ'ಕ್ಕೆ 3 ಸ್ಥಾನಗಳು ಮೀಸಲಾಗಿದ್ದು, ಮಹಿಳೆಯರಿಗೆ ಯಾವುದೇ ಸ್ಥಾನ ಮೀಸಲಿಲ್ಲ. ಸಾಮಾನ್ಯ ಮಹಿಳೆಗೆ 26 ಸ್ಥಾನಗಳು ಮೀಸಲಾಗಿವೆ. 65 ಸ್ಥಾನಗಳು ಸಾಮಾನ್ಯಕ್ಕೆ ತೆರೆದುಕೊಂಡಿವೆ.
(ಬ್ರಾಕೆಟ್‌ನಲ್ಲಿ ಬರೆದಿರುವ ಸಂಖ್ಯೆಗಳು ಮಹಿಳೆಯರಿಗೆ ಮೀಸಲಿರುವ ಸ್ಥಾನಗಳಾಗಿವೆ)
ತಾಲೂಕುಗಳು ಒಟ್ಟು ಸ್ಥಾನಗಳು ಎಸ್‌ಸಿ ಎಸ್‌ಟಿ ಬಿಸಿಎಂ(ಅ) ಬಿಸಿಎಂ(ಬ) ಸಾಮಾನ್ಯ
ದಾಂಡೇಲಿ 7(4) 1(1) 1(1) 1(1) 0(0) 4(1)
ಜೊಯಿಡಾ 9(5) 1(1) 1(1) 2(1) 0(0) 5(2)
ಯಲ್ಲಾಪುರ 9(5) 1(1) 1(1) 2(1) 0(0) 5(2)
ಮುಂಡಗೋಡ 9(5) 2(1) 1(1) 1(1) 0(0) 5(2)
ಹಳಿಯಾಳ 9(5) 1(1) 1(1) 2(1) 0(0) 5(2)
ಸಿದ್ದಾಪುರ 9(5) 1(1) 1(1) 2(1) 0(0) 5(2)
ಅಂಕೋಲಾ 9(5) 1(1) 1(1) 2(1) 0(0) 5(2)
ಕಾರವಾರ 9(5) 1(1) 1(1) 2(1) 0(0) 5(2)
ಭಟ್ಕಳ 9(5) 1(1) 1(1) 2(1) 0(0) 5(2)
ಶಿರಸಿ 13(7) 1(1) 1(1) 3(2) 1(0) 7(3)
ಕುಮಟಾ 13(7) 1(1) 1(1) 3(2) 1(0) 7(3)
ಹೊನ್ನಾವರ 13(7) 1(1) 1(1) 3(2) 1(0) 7(3)
..........