ಯಲ್ಲಾಪುರದ ನ್ಯಾಯಾಲಯದಲ್ಲಿ ಮಹಿಳಾ ದಿನ, ವಿಶ್ವ ಗ್ರಾಹಕರ ಹಕ್ಕು ಹಾಗೂ ಜಲ ದಿನ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶೆ ಅನಿತಾಕುಮಾರಿ ಎಸ್. ಉದ್ಘಾಟಿಸಿದರು. ವಿ.ಟಿ. ಭಟ್ಟ, ಮಹಾವೀರ ಕಾಂಬಳೆ, ವಿ.ಪಿ. ಭಟ್ಟ, ಸರಸ್ವತಿ ಭಟ್ಟ, ಆರ್.ಕೆ. ಭಟ್ಟ ಇತರರಿದ್ದರು.
ಯಲ್ಲಾಪುರ: ಸ್ತ್ರೀಯರು ಕೇವಲ ಅಡುಗೆ ಮನೆಗೆ ಸೀಮಿತರಾಗದೇ, ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶೆ ಅನಿತಾಕುಮಾರಿ ಎಸ್. ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ, ವಿಶ್ವ ಗ್ರಾಹಕರ ಹಕ್ಕು ಹಾಗೂ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಯಬೇಕು ಎಂದರು.
ಮಹಿಳಾ ದಿನಾಚರಣೆ ಕುರಿತು ನ್ಯಾಯವಾದಿ ಸರಸ್ವತಿ ಭಟ್ಟ ಹಾಗೂ ಗ್ರಾಹಕರ ಹಕ್ಕುಗಳ ದಿನ, ಜಲ ದಿನದ ಕುರಿತು ನ್ಯಾಯವಾದಿ ಆರ್.ಕೆ. ಭಟ್ಟ ಉಪನ್ಯಾಸ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ವಿ.ಟಿ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಚೇತನ ನಾಯ್ಕ, ಝೀನತ್ ಭಾನು ಶೇಖ್, ಪಿಎಸ್‌ಐ ಮಹಾವೀರ ಕಾಂಬಳೆ, ಹಿರಿಯ ನ್ಯಾಯವಾದಿ ವಿ.ಪಿ. ಭಟ್ಟ ಕಣ್ಣಿಮನೆ, ಪ್ಯಾನಲ್ ವಕೀಲರಾದ ಬೇಬಿ ಅಮೀನಾ ಶೇಖ್ ಇತರರಿದ್ದರು. ಸುಧಾಕರ ನಾಯಕ ಕಾರ್ಯಕ್ರಮ ನಿರ್ವಹಿಸಿದರು.