ಲಿಯೆಜಾSSLC ಪರೀಕ್ಷೆಗೆ ಗೈರು ಎಂದು ದಾಖಲಾಗಿರುವ ಅಂಕ ಪಟ್ಟಿ.  
ಉತ್ತರ ಕನ್ನಡ

ಪರೀಕ್ಷೆ ಬರೆದರೂ ಗೈರು ಎಂದು ದಾಖಲು SSLC

ಪ್ರಮುಖ ಮುಖ್ಯಾಂಶಗಳು

  • ಇಲಾಖೆ ಯಡವಟ್ಟಿಗೆ ಅಂಧ ವಿದ್ಯಾರ್ಥಿನಿ ದಿಗಿಲು
  • ಯೂನಿಯನ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲಿಯೆಜಾ ಖಾನ್
  • ಹುಟ್ಟಿನಿಂದಲೂ ಅಂಧೆಯಾಗಿರುವ ಈಕೆ
ಶಿರಸಿ: ನಗರದ ಅಂಧ ವಿದ್ಯಾರ್ಥಿನಿಯೋರ್ವಳು (SSLC) ಎಲ್ಲ ಆರೂ ಪರೀಕ್ಷೆಗಳನ್ನು ಬರೆದಿದ್ದರೂ ಸಮಾಜ ವಿಜ್ಞಾನ ವಿಷಯದಲ್ಲಿ ಗೈರು ಎಂದು ದಾಖಲಿಸಿ ಆಕೆಯನ್ನು ಅನುತ್ತೀರ್ಣಗೊಳಿಸಲಾಗಿದೆ.
ಇಲಾಕೆಯ ಈ ನಿರ್ಲಕ್ಷ್ಯಕ್ಕೆ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಯೂನಿಯನ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲಿಯೆಜಾ ಖಾನ್ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾದ ವಿದ್ಯಾರ್ಥಿನಿ.
ಲಿಯೆಜಾ SSLC ಪರೀಕ್ಷೆಗೆ ಹಾಜರಾಗಿರುವ ಹಾಲ್ ಟಿಕೆಟ್.
ಹುಟ್ಟಿನಿಂದಲೂ ಅಂಧೆಯಾಗಿರುವ ಈಕೆ ಸತತ ಪರಿಶ್ರಮದಿಂದ ವ್ಯಾಸಂಗ ಮಾಡಿ ಪರೀಕ್ಷೆಯನ್ನೂ ಬರೆದಿದ್ದಾಳೆ. ಆದರೆ ಫಲಿತಾಂಶ ಮಾತ್ರ ಅವರಿಗೆ ದಿಗಿಲು ಮೂಡಿಸಿದೆ.
ಉರ್ದು ಭಾಷೆಗೆ 124 ಅಂಕ, ಕನ್ನಡ ಭಾಷೆಗೆ 100, ಇಂಗ್ಲಿಷ್ 92, ಇಕಾನಾಮಿಕ್ಸ್ 98 ಹಾಗೂ ಪಾಲಿಟಿಕಲ್ ಸೈನ್ಸ್ ವಿಷಯದಲ್ಲಿ 92 ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಆದರೆ, ಸಮಾಜ ವಿಜ್ಞಾನ ಪರೀಕ್ಷೆಗೆ ಗೈರು ಎಂದು ದಾಖಲಿಸುವ ಮೂಲಕ ಆಕೆಯನ್ನು ಅನುತ್ತೀರ್ಣಗೊಳಿಸಲಾಗಿದೆ.
ಈ ಕುರಿತಂತೆ ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಯ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರ ನಾಗರಾಜ ನಾಯ್ಕ ಅವರನ್ನು ಭೇಟಿ ಮಾಡಿ ಪರೀಕ್ಷೆಗೆ ಹಾಜರಾಗಿರುವ ದಾಖಲೆಯನ್ನು ಪೂರೈಸಿದ್ದಾರೆ.
ತಾಂತ್ರಿಕ ದೋಷದಿಂದ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು ಎಂದು ದಾಖಲಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ದೋಷ ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ.