ಹೊನ್ನಾವರ ತಾಲೂಕಿನ ಮಂಕಿ ತಾಳಮಕ್ಕಿಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಣ್ಣಪ್ಪ ಎಂ. ನಾಯ್ಕ, ಪುಟ್ಟೇ ಗೌಡ, ಉಲ್ಲಾಸ ನಾಯ್ಕ ಇತರರಿದ್ದರು. 
ಉತ್ತರ ಕನ್ನಡ

‘ಗ್ಯಾರಂಟಿ’ಗಳಿಂದ ಮಹಿಳಾ ಸ್ವಾವಲಂಬನೆ guarantees

ವಿನಯ ಹೆಗಡೆ
ಹೊನ್ನಾವರ: ತಾಲೂಕು ಗ್ಯಾರಂಟಿ (guarantees) ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಮತ್ತು ತಾಳಮಕ್ಕಿಯ ಶ್ರೀ ದುರ್ಗಾಪರಮೇಶ್ವರಿ ಮಾತೃ ಮಂಡಳಿಯ ಸಹಕಾರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮ ತಾಲೂಕಿನ ಮಂಕಿ ತಾಳಮಕ್ಕಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಅಣ್ಣಪ್ಪ ಎಂ. ನಾಯ್ಕ, ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸ್ವಾವಲಂಬನೆ ಕುರಿತು ವಿವರ ನೀಡಿದರು.
ಪಪಂ ಸದಸ್ಯೆ ಉಷಾ ನಾಯ್ಕ ಮಾತನಾಡಿ, ಮಹಿಳೆಯರು ಪರಿಣಾಮಕಾರಿಯಾಗಿ ಎಲ್ಲಾ ರಂಗದಲ್ಲಿಯೂ ಕೆಲಸ ನಿರ್ವಹಿಸಲು ಶಕ್ತಳಾಗಿದ್ದಾಳೆ ಎಂದರು.
ಮಹಿಳೆಯರಿಗೆ ರಂಗೋಲಿ ಮತ್ತು ಸಂಗೀತ ಕುರ್ಚಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀ ಮಂಜುನಾಥ ಸ್ಪೋರ್ಟ್ಸ್ ಕ್ಲಬ್ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು.
ತಾಪಂ ಇಒ ಪುಟ್ಟೇ ಗೌಡ, ಜಿಲ್ಲಾ ಯೋಜನಾ ಸಮಿತಿ ಸದಸ್ಯ ಉಲ್ಲಾಸ ಎ. ನಾಯ್ಕ, ಶಿಕ್ಷಕ ಉಮೇಶ ನಾಯ್ಕ ಮಾತನಾಡಿದರು.
ಗ್ಯಾರಂಟಿ ಸಮಿತಿ ಸದಸ್ಯರಾದ ಕೃಷ್ಣ ನಾಯ್ಕ ಮಾರಿಮನೆ, ಮಾರುತಿ ಮೊಗೇರ, ಮಾತೃ ಮಂಡಳಿ ಅಧ್ಯಕ್ಷೆ ಮಂಗಲಾ ಡಿ. ನಾಯ್ಕ, ವಸಂತಿ ಆರ್. ನಾಯ್ಕ, ಶಿಕ್ಷಕರಾದ ಅಣ್ಣಪ್ಪ ಜಿ. ನಾಯ್ಕ, ಅಂಬಿಕಾ ಎ. ನಾಯ್ಕ ಇತರರು ಉಪಸ್ಥಿತರಿದ್ದರು. ಮಹಿಳಾ ಪಲಾನುಭವಿಗಳು, ಮಾತೃ ಮಂಡಳಿ ಹಾಗೂ ಸ್ವ ಸಹಾಯ ಗುಂಪಿನ ಸದಸ್ಯರು ಇದ್ದರು.