ಹಳಿಯಾಳ ಲಯನ್ಸ ಕ್ಲಬ್ ಕೇಂದ್ರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಳಿಯಾಳ ಮತ್ತು ವಿಶ್ವ ಮಾನವ ಹಕ್ಕುಗಳ ಆರ್. ಕೆ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಉದ್ಘಾಟಿಸಿದರು. ಭಾರತಿ ನಲವಡೆ, ಪೂಜಾ ಧೂಳಿ ಇತರರಿದ್ದರು. 
ಉತ್ತರ ಕನ್ನಡ

ಎಲ್ಲ ರಂಗಗಳಲ್ಲೂ ಹೆಣ್ಣಿನ ಸಾಧನೆ ಅಪಾರ

ವಿನಯ ಆಶೋಕ ನಾಯ್ಕ
ಹಳಿಯಾಳ: ಪೌರಾಣಿಕ ಕಾಲದಿಂದಲೂ ಹೆಣ್ಣಿನ ಪಾತ್ರಕ್ಕೆ ವಿಶಿಷ್ಟವಾದ ಐತಿಹ್ಯವಿದೆ ಮತ್ತು ಎಲ್ಲ ರಂಗಗಳಲ್ಲೂ ಅವಳ ಸಾಧನೆ ಸ್ತುತ್ಯಾರ್ಹವಾಗಿದೆ ಎಂದು ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಹೇಳಿದರು.
ಹಳಿಯಾಳದ ಲಯನ್ಸ ಕ್ಲಬ್ ಕೇಂದ್ರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಳಿಯಾಳ ಮತ್ತು ವಿಶ್ವ ಮಾನವ ಹಕ್ಕುಗಳ ಆರ್.ಕೆ.ಫೌಂಡೇಶನ್ ವತಿಯಿಂದ ಸೋಮವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ವಿಶ್ವ ಮಾನವ ಹಕ್ಕುಗಳ ಆರ್.ಕೆ. ಫೌಂಡೇಶನ್ ಅಧ್ಯಕ್ಷೆ ಪೂಜಾ ರಾಜು ಧೂಳಿ ಮಾತನಾಡಿ, ಮಹಿಳೆಯರ ಸಬಲತೆಗೆ ಶಿಕ್ಷಣದ ಪಾತ್ರ ಮುಖ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಹಳಿಯಾಳ ಅಧ್ಯಕ್ಷೆ ಸುಮಂಗಲಾ ಅಂಗಡಿ ಮಾತನಾಡಿ, ಶರಣರ ಕಾಲದಿಂದಲೂ ಮಹಿಳೆಯರ ಸ್ಥಾನಕ್ಕೆ ಗೌರವ ನೀಡಲಾಗುತ್ತಿದ್ದು ಅಕ್ಕಮಹಾದೇವಿಯವರ ಜೀವನದ ಅನುಭವ ಶ್ಲಾಘನೀಯ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕಾಧ್ಯಕ್ಷೆ ಭಾರತಿ ನಲವಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಅಸ್ಮಿತೆಗೆ ಹೆಚ್ಚಿನ ಬೆಂಬಲವು ಕುಟುಂಬ ಮತ್ತು ಸಮಾಜದಿಂದ ದೊರೆತರೆ ಅವಳ ಸಾಧನೆಗೆ ಮೆಟ್ಟಿಲಾಗುವಲ್ಲಿ ಸಂದೇಹವಿಲ್ಲ ಎಂದರು.
ಈ ಸಂದರ್ಭದಲ್ಲಿ ಡಾ. ಸರೋಜಾ ಜಾಧವ ಉಪನ್ಯಾಸ ನೀಡಿದರು. ನ್ಯಾಯವಾದಿ ಸುರೇಖಾ ಗುನಗಾ ಮಹಿಳೆಯರ ಕಾನೂನಾತ್ಮಕ ಸೌಲಭ್ಯಗಳನ್ನು ತಿಳಿಸಿದರು.
ಕವಿಗೋಷ್ಠಿಯಲ್ಲಿ ಕವಯತ್ರಿಯರಾದ ಅವ್ವಕ್ಕಾ ಪೇಟ್ನೇಕರ, ಕವಿತಾ ನಾಯಕ, ಸುಮಂಗಲಾ ಚಕ್ರಸಾಲಿ, ಲೀನಾ ಕುಡ್ತರಕರ, ನಂದಿನಿ ಸಿದ್ದರಕರ, ತೇಜಸ್ವಿನಿ ಹುಂಡೇಕರ ಭಾಗವಹಿಸಿದರು.
ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಗಣಪತಿ ಗಂಗಾಧರ, ಸುಮಾ ಹಡಪದ, ಬಸವರಾಜ ಹಡಪದ, ಪುಷ್ಪಾ ಗಂಗಾಧರ, ಜನಸ್ಪಂದನ ಸೇವಾ ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷ ಸುಧಾ ಶೆಟ್ಟಿ, ಭಾರತಿ ಕದಂ, ಶಾಂತಾ ಹಿರೇಕರ, ಅನಿತಾ ಬೋಳಶೆಟ್ಟಿ, ಲಕ್ಷ್ಮೀ ಪುನ್ನಪ್ಪನವರ, ಏಕನಾಥ ಧಾರವಾಡಕರ, ಸುಜಾತಾ ಮಾದರ, ಪೂನಂ ಧಾರವಾಡಕರ ಇದ್ದರು. ಮಂಜುಳಾ ಮೋರೆ ಕಾರ್ಯಕ್ರಮ ನಿರೂಪಿಸಿದರು.