ಯಲ್ಲಾಪುರ ತಾಲೂಕಿನ ಡೌಗಿನಾಲಾ ಬಳಿ ಕಾಡಾನೆ Wild elephants ಹಾಗೂ ಮರಿ ಓಡಾಡುತ್ತಿರುವುದು.  
ಉತ್ತರ ಕನ್ನಡ

wild elephants ಕಣ್ಣಿಗೇರಿ ಸುತ್ತಮುತ್ತ ಕಾಡಾನೆ ಓಡಾಟ

ಮಂಜುನಾಥ ಕೆಂಪಸಣ್ಣವರ
ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಸುತ್ತಮುತ್ತ ಕಾಡಾನೆ Wild elephants ಓಡಾಟ ಮುಂದುವರಿದಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಮುಂದುವರಿದಿದೆ.
ಕಳೆದ ಎರಡು ತಿಂಗಳಿಂದ ಕಣ್ಣಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧೆಡೆ ಕೃಷಿ ಭೂಮಿಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ. ಹಳಿಯಾಳ ರಸ್ತೆಯಲ್ಲಿ ಪ್ರತಿದಿನ ವಾಹನಗಳನ್ನು ಅಡ್ಡಗಟ್ಟಿ ಸವಾರರನ್ನು ಭಯಗೊಳಿಸುತ್ತಿದೆ.
ಇಷ್ಟು ದಿನಗಳ ಕಾಲ ಕೇವಲ ಒಂದೇ ಆನೆ ಓಡಾಡುತ್ತಿತ್ತು. ಈಗ ಅದರ ಜತೆ ಮರಿ ಆನೆಯೊಂದು ಸೇರ್ಪಡೆಯಾಗಿದೆ. ಸೋಮವಾರ ಬೆಳಗ್ಗೆ ಆನೆ ಹಾಗೂ ಮರಿಯಾನೆ ಯಲ್ಲಾಪುರ, ಹಳಿಯಾಳ ಗಡಿಭಾಗದ ಡೌಗಿನಾಲಾ ಬಳಿ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.
ಯಲ್ಲಾಪುರ, ಹಳಿಯಾಳ ವಾಹನ ಸವಾರರು ಕಣ್ಣಿಗೇರಿ ಸುತ್ತಮುತ್ತಲಿನ ಗ್ರಾಮಸ್ಥರು ಭಯದಲ್ಲೇ ಓಡಾಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಆನೆ ಓಡಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು.