ಮೃತರ ಕಾಡಾನೆ  
ಉತ್ತರ ಕನ್ನಡ

ವಿದ್ಯುತ್ ಶಾಕ್ ನಿಂದ ಕಾಡಾನೆ ಸಾವು

ಶಿರಸಿ: ವಿದ್ಯುತ್ ಶಾಕ್ ನಿಂದ ಕಾಡಾನೆ ಮೃತಪಟ್ಟ ಘಟನೆ ಭಾನುವಾರ ಶಿರಸಿಯ ಮಳಲಗಾಂವ ಗ್ರಾಮದಲ್ಲಿ ನಡೆದಿದೆ.

ಭತ್ತದ ಗದ್ದೆಗೆ ಬರುವ ಕಾಡು ಪ್ರಾಣಿಗಳ ತಡೆಗೆ ತಂತಿ ಹಾಕಿ ಅದಕ್ಕೆ ನೇರವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಅದನ್ನು ಸ್ಪರ್ಷಿಸಿ ಒಂಟಿ ಸಲಗ ಮೃತಪಟ್ಟಿದೆ.

ವಿಚಾರಣೆ ನಡೆಸಿದ ಡಿಸಿಎಫ್ ಸಂದೀಪ ಸೂರ್ಯವಂಶಿ ಹಾಗೂ ಪೊಲೀಸ್ ಅಧಿಕಾರಿಗಳು ಶಿವಪ್ಪ ನಾಯ್ಕ ಹಾಗೂ ನಾಗರಾಜ ನಾಯ್ಕ ಎಂಬುವವರನ್ನು ಬಂಧಿಸಿದ್ದಾರೆ. ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.