ಶಿರಸಿ ತಾಲೂಕು ತಟಗುಣಿ ಗ್ರಾಮದಲ್ಲಿ ತೋಟದ ಬಾವಿಗೆ ಬಿದ್ದ ಕಾಡುಕೋಣ.  
ಉತ್ತರ ಕನ್ನಡ

ಬಾವಿಗೆ ಬಿದ್ದ ಕಾಡುಕೋಣ ರಕ್ಷಣೆ

ಶಿರಸಿ: ತಾಲೂಕಿನ ತಟಗುಣಿ ಗ್ರಾಮದ ಗೋಳಗೋಡಿನ ತೋಟದ ಬಾವಿಗೆ ಕಾಡುಕೋಣ ಬಿದ್ದ ಘಟನೆ ಶನಿವಾರ ಸಂಭವಿಸಿದೆ.
ಸುಮಾರು 5 ವರ್ಷ ವಯಸ್ಸಿನ ಕಾಡುಕೋಣ ಇಲ್ಲಿಯ ಗಜಾನನ ಮಹಾಬಲೇಶ್ವರ ಹೆಗಡೆ ಅವರ ತೋಟದ ಬಾವಿಯಲ್ಲಿ ಬಿದ್ದಿತ್ತು. ಬೆಳಗ್ಗೆ ತೋಟಕ್ಕೆ ಆಗಮಿಸಿದ ವೇಳೆ ಘಟನೆ ನಡೆದಿರುವುದು ಅರಿವಿಗೆ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಡಿಎಫ್‌ಒ ಸಂದೀಪ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯಾಧಿಕಾರಿ ಎಸ್.ಎಸ್. ನಿಂಗಾಣಿ, ವಲಯಾರಣ್ಯಾಧಿಕಾರಿ ಗಿರೀಶ ನಾಯ್ಕ ಹಾಗೂ ಸಿಬ್ಬಂದಿ ಕಾಡುಕೋಣವನ್ನು ಬಾವಿಯಿಂದ ಎತ್ತಿ ಕಾಡಿಗೆ ಬಿಟ್ಟಿದ್ದಾರೆ.
ಆಳದ ಬಾವಿ ಅಲ್ಲದ ಕಾರಣ ಕಾಡುಕೋಣಕ್ಕೆ ಯಾವುದೇ ಗಾಯ ಆಗದೇ ಸುರಕ್ಷಿತವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.