ಅಪ್ರಾಪ್ತೆಯೋರ್ವಳು ಹೆರಿಗೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡನ್ ನೇತ್ರಾವತಿ ಹರಿಕಂತ್ರ ಅವರನ್ನು ಅಮಾನತು ಹಾಗೂ ರಾತ್ರಿ ಕಾವಲು ಕಾಯುವ ಸಿಬ್ಬಂದಿ ಶಶಿಕಲಾ ಮರಾಠಿ, ಅಡುಗೆ ಸಿಬ್ಬಂದಿ ಶಿಲ್ಪಾ ನಾಯ್ಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.  
ಉತ್ತರ ಕನ್ನಡ

suspended ವಾರ್ಡನ್ ಅಮಾನತು: ಕಾವಲು, ಅಡುಗೆ ಸಿಬ್ಬಂದಿ ವಜಾ

ಪ್ರಮುಖ ಮುಖ್ಯಾಂಶಗಳು

  • ಬಂಡಲದ ವಿದ್ಯಾರ್ಥಿ ನಿಲಯದಲ್ಲಿ ಅಪ್ರಾಪ್ತೆಯ ಹೆರಿಗೆ ಪ್ರಕರಣ
*
ಶಿರಸಿ: ಬಂಡಲದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ಅಪ್ರಾಪ್ತೆಯೋರ್ವಳು ಹೆರಿಗೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡನ್ ನೇತ್ರಾವತಿ ಹರಿಕಂತ್ರ ಅವರನ್ನು ಅಮಾನತು ಹಾಗೂ ರಾತ್ರಿ ಕಾವಲು ಕಾಯುವ ಸಿಬ್ಬಂದಿ ಶಶಿಕಲಾ ಮರಾಠಿ, ಅಡುಗೆ ಸಿಬ್ಬಂದಿ ಶಿಲ್ಪಾ ನಾಯ್ಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈ ಕುರಿತಂತೆ ಜಿಪಂ ಸಿಇಒ ದಿಲೀಷ್ ಶಸಿ ಆದೇಶ ಹೊರಡಿಸಿದ್ದಾರೆ.
ಶಾಲಾ ರಜೆ ಮುಗಿಸಿ, ವಸತಿ ನಿಲಯಕ್ಕೆ ವಿದ್ಯಾರ್ಥಿನಿ ಆಗಮಿಸಿ ನಾಲ್ಕು ದಿನಗಳು ಕಳೆದಿದ್ದರೂ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ನಡೆಸಿಲ್ಲ. ವಿದ್ಯಾರ್ಥಿನಿಯರ ಚಲನವಲನಗಳ ಕಡೆ ಗಮನ ಹರಿಸಿಲ್ಲ. ಅಡುಗೆ ಸಹಾಯಕರು ಹಾಗೂ ಕಾವಲು ಸಿಬ್ಬಂದಿ ಮಕ್ಕಳ ಕಡೆ ಗಮನ ಹರಿಸಿಲ್ಲ ಎಂಬುದು ಘಟನೆಯಿಂದ ತಿಳಿದುಬರುತ್ತದೆ. ಈ ಹಿನ್ನೆಲೆಯಲ್ಲಿ, ಕರ್ತವ್ಯ ಲೋಪ ಎಸಗಿದ್ದಾರೆಂದು ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಲಾಗಿದೆ.