ಕೆನರಾ ಸಹಕಾರಿಗೆ ಆಯ್ಕೆಯಾದ Victory ಕೆಡಿಸಿಸಿ ಬ್ಯಾಂಕ ಮಾಜಿ ನಿರ್ದೇಶಕ ಗಜಾನನ ಪೈ ಅವರನ್ನು ನಿಕಟಪೂರ್ವ ಅಧ್ಯಕ್ಷ ಅರವಿಂದ ಪೈ ಅಭಿನಂದಿಸಿದರು. 
ಉತ್ತರ ಕನ್ನಡ

Victory ಅರವಿಂದ ಪೈ ಬಣಕ್ಕೆ ಗೆಲುವು

ಕುಮಟಾ: ಇಲ್ಲಿನ ರಥಬೀದಿಯ ಕೆನರಾ ಸಾರಸ್ವತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಆಡಳಿತ ಮಂಡಳಿಗೆ ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಅರವಿಂದ ಪೈ ಬಣಕ್ಕೆ Victory ಗೆಲುವಾಗಿದೆ.
ಕೆನರಾ ಸಾರಸ್ವತ ಕ್ರೆಡಿಟ್ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿಗಾಗಿ ಫೆ. 1ರಂದು ಚುನಾವಣೆ ನಡೆದಿದ್ದು, ಕೆಲವು ಸದಸ್ಯರು ಮತದಾನದ ಹಕ್ಕು ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಫಲಿತಾಂಶ ವಿಳಂಬವಾಗಿತ್ತು.
ಏ. 19 ರಂದು ಉಚ್ಚ ನ್ಯಾಯಾಲಯದ ಆದೇಶದಂತೆ ಮತ ಎಣಿಕೆಯಾಗಿದ್ದು, ಈಗಾಗಲೇ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಅರವಿಂದ ಪೈ ನೇತೃತ್ವದ ತಂಡದ ಉಮೇದುವಾರರು ಒಟ್ಟು 12 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.
ಪ್ರಥಮ ಬಾರಿಗೆ ಕೆನರಾ ಸಾರಸ್ವತ ಕ್ರೆಡಿಟ್ ಸೌಹಾರ್ದ ಸಹಕಾರಿಯ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಜಿಪಂ ಮಾಜಿ ಸದಸ್ಯ, ಕೆಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಗಜಾನನ ನಾಗೇಶ ಪೈ ಅವರನ್ನು ಕೆನರಾ ಸಾರಸ್ವತದ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅರವಿಂದ ಪೈ ಅಭಿನಂದಿಸಿದರು.
ಉಳಿದಂತೆ ರಾಜೇಶ ಡಿ. ಪೈ, ವಾಸುದೇವ ಡಿ. ಶಾನಭಾಗ, ಸುಮಂತ ಎಸ್.ಆಚಾರ್ಯ, ಅಶೋಕ ಬಿ. ಶಾನಭಾಗ, ಶ್ರೀಕಾಂತ ಎಸ್. ಪೈ, ಕೃಷ್ಣ ಆರ್. ಗುನಗಾ, ಶ್ರೀಕಾಂತ ಎಸ್. ನಾಯಕ, ಸೀಮಾ ವೈಕುಂಠ ಪ್ರಭು, ಅನ್ನಪೂರ್ಣಾ ಎಚ್. ನಾಯಕ, ಸುಕ್ರಿ ಜೋಗಿ ಮುಕ್ರಿ ಆಯ್ಕೆಯಾದ ಅಭ್ಯರ್ಥಿಗಳು.