ಸ್ಕೂಟಿ ಅಪಘಾತ ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

ಬೈಕ್‌ ಅಪಘಾತ ಇಬ್ಬರು ಸಾವು

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ್ದ ಎರಡು ಪ್ರತ್ಯೇಕ ಸ್ಕೂಟರ್‌ ಅಪಘಾತಗಳಲ್ಲಿ ಗಾಯಗೊಂಡಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಅಮದಳ್ಳಿ ಸಮೀಪ ಸಂಭವಿಸಿದ್ದ ಸ್ಕೂಟರ್‌ ಬೈಕ್‌ ಡಿಕ್ಕಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಅಂಕೋಲಾ ಅವರ್ಸಾದ ಸಚಿನ್ ವೆಂಕಟೇಶ ತಳೇಕರ್(38) ಮೃತರು.
ಫೆ.14 ರಂದು ಅಂಕೋಲಾದಿAದ ಕಾರವಾರ ಕಡೆ ಬರುತ್ತಿರುವಾಗ ಸಚಿನ್ ಅವರ ಸ್ಕೂಟಿಗೆ ಕಾರವಾರ ಮುದಗಾ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಕ್ ಡಿಕ್ಕಿಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಸಚಿನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಸಚಿನ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಬೇರೆ ಆಸ್ಪತ್ರೆಗೆ ಕೊಂಡೊಯ್ಯುವAತೆ ತಿಳಿಸಿದ್ದರಿಂದ ಅವರನ್ನು ಕರೆತಂದು ಮತ್ತೆ ಕಾರವಾರ ಕ್ರಿಮ್ಸ್ಗೆ ಸೇರಿಸಲಾಗಿತ್ತು. ಶುಕ್ರವಾರ ಸಚಿನ್ ಮೃತಪಟ್ಟಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂಬದಿ ಸವಾರ ಸಾವು:

ಗುರುವಾರ ರಾತ್ರಿ ಮಾಜಾಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರಗಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ದೇವಳಿವಾಡದ ಶರಣ ಚಂದ್ರಕಾAತ ಹರಿಕಂತ್ರ(23) ಮೃತ ಯುವಕ. ಸ್ನೇಹಿತ ಸಂಕೇತ ಮಹಾದೇವ ವೆರ್ಣೇಕರ್ ಜೊತೆ ಗೋವಾಕ್ಕೆ ಸ್ಕೂಟಿಯಲ್ಲಿ ತೆರಳಿ ವಾಪಸಾಗುತ್ತಿದ್ದ ವೇಳೆ ಸ್ಕೂಟಿಯ ನಿಯಂತ್ರಣ ತಪ್ಪಿ ಇಬ್ಬರೂ ಬಿದ್ದಿದ್ದರು. ಬೈಕ್ ಚಾಲಕ ಸಂಕೇತ ಸಹ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಗೋವಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.