ಮಧುಸಿಂಗ ರಜಪೂತ್, ಸಂಜು ನವಲೆ
ಮುಂಡಗೋಡ: ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ತಾಲೂಕಿನ ಬಸಾಪೂರ ಗ್ರಾಮದ ಮಧುಸಿಂಗ್ ರಜಪೂತ (31) ಹಾಗೂ ಪಟ್ಟಣದ ಗಾಂಧಿನಗರದ ಮಂಜು ನವಲೆ (30) ಎಂಬಿಬ್ಬರು ಆರೋಪಿಗಳಿಗೆ ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ
ಸಂಜು ನವಲೆ ಮಾಡಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ. ಆರೋಪಿ ಮಂಜು ನವಲೆಯನ್ನು ಕೆಜಿಎ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಆರೋಪಿ ಮಧುಸಿಂಗ್ ರಜಪೂತ್ನನ್ನು ಮಂಡ್ಯ ಜಿಲ್ಲೆಯ ಮಂಡ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ತಣದಿಂದ ಜಾರಿಗೆ ಬರುವಂತೆ 6 ತಿಂಗಳುವರೆಗೆ ಗಡಿಪಾರು ಮಾಡಲಾಗಿದೆ.
ಆರೋಪಿಗಳ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಅಪರಾಧ ಹಿನ್ನೆಲೆಯನ್ನೇ ಬಂಡವಾಳವಾಗಿರಿಸಿಕೊಂಡು ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಅಪರಾಧ ಚಟುವಟಿಕೆಗಳ ಮೂಲಕ ಸಾರ್ವಜನಿಕ ಸುರತೆಗೆ ಅಪಾಯ ತಂದು ಸಾರ್ವಜನಿಕ ಶಾಂತಿ, ನೆಮ್ಮದಿ, ಸೌಹಾರ್ದ, ಆಸ್ತಿಪಾಸ್ತಿ ಹಾಗೂ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟು ಮಾಡಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕಂಡು ಬಂದಿದ್ದರಿಂದ ಇಲ್ಲಿನ ಪೊಲೀಸ್ ನಿರೀಕರು ಇಬ್ಬರ ವಿರುದ್ಧ ಗಡಿಪಾರಿಗೆ ವಿವರವಾದ ಪ್ರಸ್ತಾವನೆಯ ಅಜಿರ್ಯನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಪೊಲೀಸ್ ಅಧೀಕರಿಗೆ ಸಲ್ಲಿಸಿದ್ದರು.
ಗಡಿಪಾರು ಪ್ರಸ್ತಾವನೆ ಅಜಿರ್ಯನ್ನು ಸ್ವೀಕರಿಸಿ ವಿಚಾರಣೆ ನಡೆಸಿ ಅಭಿಯೋಜನೆ ಮತ್ತು ಪ್ರತಿವಾದಿಗಳು ವಾದ ಮಂಡಿಸಿದ್ದು, ಅದನ್ನು ಆಲಿಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಪೊಲೀಸ್ ಅಧೀಕರು ಪರಿಶೀಲನೆಯಿಂದ ಗಡಿಪಾರು ಅವಶ್ಯವೆಂದು ಕಂಡುಬಂದಿದ್ದರಿಂದ ಜೂ. 27ರಂದು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಇಬ್ಬರಿಗೂ ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಿದ್ದಾರೆ.