ಹೆದ್ದಾರಿಯಲ್ಲಿ ಮರಬಿದಗದು ಕಾರು ಪಾರಾಗಿದರ
ಸಿದ್ದಾಪುರ: ಶಿರಸಿ- ಸಿದ್ದಾಪುರ ರಾಜ್ಯ ಹೆದ್ದಾರಿಯ ಕಾಳೆನಳ್ಳಿ ಸಮೀಪ ಮರ ಬಿದ್ದು, ಚಲಿಸುತ್ತಿದ್ದ ಕಾರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದೆ.
ಶಿರಸಿಯಿಂದ ಸಿದ್ದಾಪುರ ಕಡೆಗೆ ಕಸರೊಂದು ಬರುತ್ತಿರುವಾಗ ಭಾರೀ ಗಾತ್ರದ ಮರ ಬಿದ್ದಿದ್ದು ಕೂದಲೆಳೆಯ ಅಂತರದಲ್ಲಿ ಕಾರಿನಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ.
ಕಾರಿನಲ್ಲಿ ಸಿರಸಿಯ ಮಾರಿಕಾಂಬಾ ದೇವಸ್ಥಾನ ಸಮೀಪದ ನಾರಾಯಣ ಭಟ್ಟ ದಂಪತಿಗಳಾಗಿದ್ದಾರೆ.
ಮರಬಿದ್ದಿರುವುದರಿಂದ ರಾಜ್ಯ ಹೆದ್ದಾರಿಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ವಾಹನ ಸಂಚಾರ ಸ್ಥಗಿತ ಗೊಂಡಿದ್ದು ಅರಣ್ಯ ಇಲಾಖೆಯವರು, ಸ್ಥಳೀಯರು ರಸ್ತೆಗೆ ಅಡ್ಡವಾಗಿ ಬಿದ್ದಮರವನ್ನು ತೆರವುಗೊಳಿಸಿದರು.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.