ಮುಂಡಗೋಡ ಜೋಗೇಶ್ವರ ಹಳ್ಳದ ಮೇಲ್ಭಾಗದ ಅತಿಕ್ರಮಣ ಗದ್ದೆಯಲ್ಲಿ ಮಣ್ಣು (Soil) ಸಾಗಾಟ ಮಾಡಲು ವಾಹನಗಳಿರುವುದು.  
ಉತ್ತರ ಕನ್ನಡ

ಅತಿಕ್ರಮಣ ಗದ್ದೆಯಿಂದ ಮಣ್ಣು ಸಾಗಾಟ Soil

ವಿನಯ ಹೆಗಡೆ
ಮುಂಡಗೋಡ: ತಾಲೂಕಿನ ಕಲಕೇರಿ ಬೀಟ್ ವ್ಯಾಪ್ತಿಯ ಜೋಗೇಶ್ವರ ಹಳ್ಳದ ಮೇಲ್ಭಾಗದಲ್ಲಿರುವ ಅತಿಕ್ರಮಣ ಗದ್ದೆಯಿಂದ ಮಣ್ಣು (Soil) ಸಾಗಿಸುತ್ತಿದ್ದ ವೇಳೆ ಲಕ್ಕೋಳ್ಳಿ ಅರಣ್ಯ ಸಮಿತಿಯವರು ವಿರೋಧ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆದಿದೆ.
ಅತಿಕ್ರಮಣ ಗದ್ದೆಯಲ್ಲಿ ಮಣ್ಣು ನೆಲಸಮ ಮಾಡುವುದಾಗಿ ಹೇಳಿ ಜೆಸಿಬಿಯಿಂದ ಭೂಮಿ ಅಗೆದು ಟ್ರಾೃಕ್ಟರ್ ಮೂಲಕ ಮಣ್ಣನ್ನು ಗದ್ದೆಯಿಂದ ಬೇರೆಡೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಲಕ್ಕೋಳ್ಳಿ ಅರಣ್ಯ ಸಮಿತಿಯವರು ತಡೆದಿದ್ದಾರೆ.
ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಣ್ಣು ಸಾಗಾಟ ಮಾಡುತ್ತಿದ್ದವರ ನಡುವೆ ಮಣ್ಣು ಸಾಗಾಟಕ್ಕೆ ಅವಕಾಶ ನೀಡುವ ಕುರಿತಂತೆ ವಾಗ್ವಾದ ನಡೆದಿದೆ.
ಅತಿಕ್ರಮಣ ಗದ್ದೆಯಿಂದ ಮಣ್ಣು ಸಾಗಾಟ ಮಾಡಲು ಅವಕಾಶ ನೀಡುವುದಿಲ್ಲವೆಂದು ಅರಣ್ಯ ಇಲಾಖೆ ಸಿಬ್ಬಂದಿ ಮಣ್ಣು ಸಾಗಾಟಕ್ಕೆ ಬಳಸುತ್ತಿದ್ದ ಒಂದು ಜೆಸಿಬಿ ಹಾಗೂ 3 ಟ್ರಾೃಕ್ಟರ್ ಅನ್ನು ಮರಳಿ ಕಳಿಸಿದ್ದಾರೆ. 

ಅತಿಕ್ರಮಣ ಗದ್ದೆಯಲ್ಲಿನ ಮಣ್ಣು ಸಾಗಿಸುತ್ತಿರುವ ಕುರಿತು ಸಿಬ್ಬಂದಿ ವರದಿ ಸಲ್ಲಿಸಿದ ನಂತರ ಸಂಬಂಧಪಟ್ಟವರನ್ನು ಕರೆಸಿ ವಿಚಾರಣೆ ನಡೆಸುತ್ತೇವೆ.