ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಮೂಲಕ ಕೈಗಾಕ್ಕೆ ಬೃಹತ್‌ಯಂತ್ರೋಪಕರಣವನ್ನು ಭಾರಿ ವಾಹನದ ಮೂಲಕ ಸಾಗಿಸಲಾಯಿತು. 
ಉತ್ತರ ಕನ್ನಡ

ಕೈಗಾಕ್ಕೆ ಬೃಹತ್ ಯಂತ್ರೋಪಕರಣ ಸಾಗಾಟ

ಯಲ್ಲಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೂಲಕ ಕೈಗಾಕ್ಕೆ ಬೃಹತ್ ಯಂತ್ರೋಪಕರಣವನ್ನು ಭಾರಿ ವಾಹನದ ಮೂಲಕ ಸಾಗಿಸಲಾಯಿತು. ಈ ವೇಳೆ ಕೆಲಕಾಲ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಹೆದ್ದಾರಿಯಲ್ಲಿ ಅಲ್ಲಲ್ಲಿ ವಾಹನ ತಡೆದುದರಿಂದ ಕೆಲಕಾಲ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಸರತಿಯಲ್ಲಿ ನಿಲ್ಲಬೇಕಾಯಿತು. ಭಾರೀ ವಾಹನ ಸಾಗಾಟಕ್ಕೆ ಪಿಎಸ್‌ಐ ಸಿದ್ದು ಗುಡಿ ನೇತೃತ್ವದಲ್ಲಿ ಪೊಲೀಸರು ಸುರಕ್ಷತಾ ಕ್ರಮ ಕೈಗೊಂಡಿದ್ದರು.