ಗೋಕರ್ಣ:ಇಲ್ಲಿನ ಮುಖ್ಯ ಕಡಲ ತೀರದಲ್ಲಿ ಸಮುದ್ರದಲ್ಲಿ ಈಜಲು ತೆರಳಿ ಅಲೆಯ ಸೆಳೆತಕ್ಕೆ ಸಿಲುಕಿ ದಡಕ್ಕೆ ಬರಲಾರದೆ ಆತಂಕಕ್ಕೊಳಗಾಗಿದ್ದ ಪ್ರವಾಸಿಯೋರ್ವರನ್ನು ಕರ್ತವ್ಯದಲ್ಲಿದ್ದ ಜೀವರಕ್ಷಕ ಮತ್ತು ಜಲಸಾಹಸ ಸಿಬ್ಬಂದಿ ಜೆಟ್-ಸ್ಕೀ ಮೂಲಕ ರಕ್ಷಿಸಿದ ಘಟನೆ ಗುರುವಾರ ಮಧ್ಯಾನ್ಹ ನಡೆದಿದೆ.ದಾವಣಗೆರೆಯಿಂದ ಬಂದಿದ್ದ 6 ಪ್ರವಾಸಿಗರ ಪೈಕಿ ಪರಶುರಾಮ ರಾಜಪ್ಪ(21) ಎನ್ನುವವರು ರಕ್ಷಿಸಲ್ಪಟ್ಟವರು.ಮೇಲ್ವಿಚಾರಕ ರವಿ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಲೋಕೇಶ ಹರಿಕಂತ್ರ,ಶಿವಪ್ರಸಾದ ಅಂಬಿಗ,ರೋಷನ್ ಖಾರ್ವಿ,ಮೋಹನ ಅಂಬಿಗ,ಶೇಖರ ಹರಿಕಂತ್ರ,ಜಲಸಾಹಸ ತಂಡದ ಅಶೋಕ ಹೊಸ್ಕಟ್ಟ,ಕಮಲಾಕರ ಹೊಸ್ಕಟ್ಟ,ದರ್ಶನ್ ಲಕ್ಕುಮನೆ,ದೀಪಕ ಗೌಡ ಮತ್ತು ಹೋಮ್‌ಗಾರ್ಡ್ ಲಿಂಗರಾಜ ಗೌಡ ಸಹಕರಿಸಿದರು.