ಹಳಿಯಾಳ: ಸಿಡಿಲು ಬಡಿದು ಮಾವಿನ ಹಣ್ಣಿನ ವ್ಯಾಪಾರಿ ಮೃತಪಟ್ಟ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕೊಗಿಲಗೇರಿ ಗ್ರಾಮದ ಶಿವಾನಂದ ರುದ್ರಪ್ಪ ಅಂಗಡಿ(60) ಮೃತ ರೈತ.
ಘಟನೆ ವಿವರ: ಶನಿವಾರ ಸಂಜೆ ಶಿವಾನಂದ ಬೆಳವಟಗಿ ಗ್ರಾಮದ ಮಹಾಬಲೇಶ್ವರ ಶಂಭಾಜಿ ಮಂಗನಗೌಡ್ರ ಅವರ ತೋಟದಲ್ಲಿ ಮಾವಿನ ಹಣ್ಣುಕೀಳಲು ಹೋಗಿದ್ದರು. ಈ ವೇಳೆ ಭಾರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಏಕಾಏಕಿ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ತೋಟದಲ್ಲಿದ್ದ ಗುಡಿಸಿನಲ್ಲಿ ನಿಂತಾಗ ಏಕಾಏಕಿ ಸಿಡಿಲು ಬಡಿದು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರ ಪುತ್ರ ಶಿವಾನಂದ ಅವರನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತ ಪಡಿಸಿದರು.
ಮೃತ ಶಿವಾನಂದ ಮಾವಿನ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಹಳಿಯಾಳ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್‌ಐ ಬಸವರಾಜ ಮಾಬ್ನೂರ ತಿಳಿಸಿದ್ದಾರೆ.