ಪ್ರಮುಖ ಆರೋಪಿಗಳು  
ಉತ್ತರ ಕನ್ನಡ

ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಸಿಗಲಿದೆ 50 ಸಾವಿರ ರೂ. ಬಹುಮಾನ

ಕಾರವಾರ: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಹತ್ಯೆ ಯತ್ನ ಮಾಡಿದ ಇಬ್ಬರು ಪ್ರಮುಖ ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿದೆ.
ಅಬ್ದುಲ್ ಘನಿ ಹಾಗೂ ಮೊಹಮದ್ ಇಮ್ರಾನ್ ಸಲ್ಮಾನಿ ಅವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು, ಅವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 25 ಸಾವಿರ ರೂ. ಬಹುಮಾನ ನೀಡಲಾಗುವುದು. ಮಾಹಿತಿ ಇದ್ದವರು ಅಂಕೋಲಾ ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸಬಹುದು ಎಂದು ಎಸ್‌ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಹಿನ್ನೆಲೆ:
ಮಾರ್ಚ್ 25 ರಂದು ಬೆಳಗ್ಗೆ ಅಂಕೋಲಾ-ಕಾರವಾರ ರಸ್ತೆಯಲ್ಲಿ ಕ್ಷೌರದ ಅಂಗಡಿಗೆ ಬಂದ ಗೋಪಾಲಕೃಷ್ಣ ನಾಯಕ ಅವರ ಮೇಲೆ ತಂದವೊAದು ಮಾರಕಾಸ್ತçಗಳಿಂದ ದಾಳಿ ಮಾಡಿತ್ತು. ಅವರನ್ನು ತುಳಿದು ಕೊಲೆ ಮಾಡಲು ಯತ್ನಿಸಿತ್ತು. ಅವರು ತಪ್ಪಿಸಿಕೊಂಡು, ಬ್ಯಾಂಕ್ ಒಂದರ ಒಳಗೆ ತೆರಳಿ, ಜೀವ ಉಳಿಸಿಕೊಂಡಿದ್ದರು. ಅಲ್ಲಿಂತ ಹಂತಕರ ತಂಡವು ಪರಾರಿಯಾಗಿತ್ತು. ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದವು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆ 6 ಜನರನ್ನ್ನ ಗೋವಾ ಗಡಿಯಲ್ಲಿ ಬಂಽಸಿದೆ. ನಂತರ ಕಾರ್ಯಾಚರಣೆ ನಡೆಸಿ, ಗೋವಾ, ಬೆಳಗಾವಿ ಹೀಗೆ ವಿವಿಧ ಮೂಲಗಳ ಒಟ್ಟು 11 ಜನರನ್ನು ಬಂಽಸಿದೆ. ಒಟ್ಟು 21 ಜನರ ಮೇಲೆ ಪ್ರಕರಣ ದಾಖಲಿಸಿದೆ.
ಗೋಪಾಲಕೃಷ್ಣ ನಾಯಕ ಗೃಹ ಸಚಿವ ಜಿ.ಪರಮೇಶ್ವರ ಆಪ್ತರು. ಈ ಹಿಂದೆ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದರು. ಇದರಿಂದ ಇದು ಹೈ ಪ್ರೊಫೈಲ್ ಪ್ರಕರಣವಾಗಿ ಮಾರ್ಪಟ್ಟಿದೆ. ನಾಯಕ ಅವರು ಹಲ್ಲೆಯ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದಾರೆ. ಸಹಕಾರಿ ದ್ವೇಷಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿ ಪಟ್ಟಿಯಲ್ಲಿ ಹೆಸರಿರುವ ಅಂಕೋಲಾದ ಗಣ್ಯ ವ್ಯಕ್ತಿಯೊಬ್ಬರು ಬಂಧನದ ಭೀತಿಯಲ್ಲಿ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದಿರುವುದು ಅವರ ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಒಟ್ಟಾರೆ ಪ್ರಕರಣ ಅವಲೋಕಿಸಿದಾಗ ಗೋಪಾಲ ಅವರ ಹತ್ಯೆಗೆ ಸುಪಾರಿ ನೀಡಿದ್ದು, ಖಚಿತವಾಗಿದೆ. ಆದರೆ, ಇದುವರೆಗೂ ಹಲ್ಲೆ ನಡೆಸಿದ ಪ್ರಮುಖ ಆರೀಪಿಗಳು ಪತ್ತೆಯಾಗದ ಕಾರಣ ಪೊಲೀಸ್ ಇಲಾಖೆ ಈಹ ಆರೋಪಿಗಳ ತಲೆಗೆ ಬಹುಮಾನ ಘೋಷಿಸಿದೆ.