ಕಾರವಾರ: ಸಾವಿರಾರು ಮಕ್ಕಳಿಗೆ ಅನ್ನ ಹಾಕುವ ಅನ್ನದಾತೆಯರು ಸಮರ್ಪಕ ವೇತನವಿಲ್ಲದೇ ಸಮಸ್ಯೆ ಎದುರಿಸುವಂತಾಗಿದೆ. ಅಕ್ಷರ ದಾಸೋಹ ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ಪಾವತಿಯಾಗದ ಕಾರಣ ಅವರು ಬೇರೆಯವರ ಬಳಿ ಸಾಲ ಕೇಳುವಂತಾಗಿದೆ.
ಜೂನ್ ನಂತರ ಅಕ್ಷರ ದಾಸೋಹ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ಇದರಿಂದ ಅವರು ದೈನಂದಿನ ಖರ್ಚು ವೆಚ್ಚಗಳಿಗೆ ಸಾಲ, ಸೋಲ ಮಾಡುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 1034 ಸರ್ಕಾರಿ ಕಿರಿಯ ಪ್ರಾಥಮಿಕ, 976 ಹಿರಿಯ ಪ್ರಾಥಮಿಕ ಹಾಗೂ 125 ಪ್ರೌಢ ಶಾಲೆಗಳಿವೆ. ಸುಮಾರು 1.10 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 4700 ರಷ್ಟು ಅಕ್ಷರ ದಾಸೋಹ ಸಿಬ್ಬಂದಿ ಇದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಶಾಲೆಯಲ್ಲಿ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿದ್ದಾರೆ. ಕೆಲವೆಡೆ ಒಬ್ಬರೇ ಇದ್ದರೆ ಇನ್ನು ಕೆಲವೆಡೆ ಇಬ್ಬರಿದ್ದಾರೆ. ಅಕ್ಷರ ದಾಸೋಹ ಸಿಬ್ಬಂದಿಗೆ ಕೇಂದ್ರ ಸರ್ಕಾರದಿಂದ ಮಾಸಿಕ 4600 ರೂ. ಹಾಗೂ ರಾಜ್ಯ ಸರ್ಕಾರದಿಂದ 4700 ರೂ. ಸೇರಿ 9300 ರೂ. ಗೌರವಧನ ನೀಡಲಾಗುತ್ತದೆ. ಆದರೆ, ಈ ವೇತನವೂ ಮೂರು ತಿಂಗಳಿAದ ಪಾವತಿಯಾಗದ ಕಾರಣ ಅವರು ಸಮಸ್ಯೆ ಅನುಭವಿಸುವಂತಾಗಿದೆ.
ತಾಂತ್ರಿಕ ಸಮಸ್ಯೆ
ರಾಜ್ಯದಲ್ಲಿ ಈ ಹಿಂದೆ ಇಎಫ್‌ಎಂಎಸ್ ವ್ಯವಸ್ಥೆ ಮೂಲಕ ಅಡುಗೆ ಸಿಬ್ಬಂದಿಗೆ ಮಾಸಿಕ ವೇತನ ಪಾವತಿ ಮಾಡಲಾಗುತ್ತಿತ್ತು. ಆದರೆ, ಈಗ ವೇತನ ಪಾವತಿ ಪದ್ಧತಿ ಬದಲಾವಣೆ ಮಾಡಿ ಡಿಬಿಟಿ ಮೂಲಕ ಮಾಡಲು ಕ್ರಮ ವಹಿಸಲಾಗುತ್ತಿದೆ. ಇದರಿಂದ ವಿಳಂಬವಾಗುತ್ತಿದೆ ಎಂದು ಅಕ್ಷರ ದಾಸೋಹ ಅಽಕಾರಿಗಳು ಹೇಳುತ್ತಾರೆ. ಈಗಾಗಲೇ ಎರಡು ತಿಂಗಳ ವೇತನ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಅದನ್ನು ತಾಲೂಕು ಹಂತದವರೆಗೆ ತಲುಪಿಸಲಾಗಿದೆ. ಎಂದು ಜಿಲ್ಲಾ ಅಕ್ಷರ ದಾಸೋಹ ಅಽಕಾರಿ ವಿ.ಟಿ.ನಾಯಕ ತಿಳಿಸಿದ್ದಾರೆ.
2 ಸಾವಿರ ಕಡಿಮೆ..?
ಅನುದಾನ ಕಡಿಮೆ ಬಂದಿರುವುದರಿAದ ಪ್ರತಿ ಸಿಬ್ಬಂದಿ ಖಾತೆಗೆ 3700+3600 ರೂ.ಗಳನ್ನು ತಾತ್ಕಾಲಿಕವಾಗಿ ಪಾವತಿ ಮಾಡಲಾಗುವುದು ಎಂದು ಅಽಕಾರಿಗಳು ಹೇಳುತ್ತಿದ್ದಾರೆ. ಈ ರೀತಿ ಎರಡು, ಮೂರು ತಿಂಗಳ ನಂತರ ಅಲ್ಪ ಹಣ ಹಾಕಿದರೆ ನಮಗೆ ಸಮಸ್ಯೆಯಾಗಲಿದೆ. ನಮ್ಮ ಖಾತೆಗೆ ಹಣ ಬಂದ ಮೇಲಷ್ಟೇ ನಮಗೆ ಎಷ್ಟು ಹಣ ಎಂಬುದು ಖಚಿತವಾಗಲಿದೆ ಎಂದು ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರು ತಮ್ಮ ಗೋಳು ತೋಡಿಕೊಂಡರು.
ಅಕ್ಷರ ದಾಸೋಹ ಸಿಬ್ಬಂದಿಗೆ ಜುಲೈ ಮತ್ತು ಆಗಸ್ಟ್ ತಿಂಗಳಿಗೆ ಸಂಬAಧಪಟ್ಟ ಹಣ ಬಂದಿದೆ. ಅದನ್ನು ಎಲ್ಲ ತಾಲೂಕುಗಳಿಗೆ ವರ್ಗಾಯಿಸಲಾಗಿದೆ. ಡಿಬಿಟಿ ಮೂಲಕ ಮಾಡಲು ಕೆಲವು ತಾಂತ್ರಿಕ ಸಮಸ್ಯೆ ಇದ್ದು, ಹೊಸ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವುದರಿಂದ ಕೊಂಚ ವಿಳಂಬವಾಗಿದೆ. ತಾಂತ್ರಿಕ ಸಮಸ್ಯೆ ಬಗೆಹರಿದ ತಕ್ಷಣ ಸಿಬ್ಬಂದಿ ಖಾತೆಗೆ ಹಣ ಜಮಾ ಆಗಲಿದೆ.
ವಿ.ಟಿ.ನಾಯಕ
ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ
ಇದೇ ಹಣದಲ್ಲಿ ಜೀವನ ನಡೆಸುವ ಕೆಲವು ಅಕ್ಷರ ದಾಸೋಹ ಸಿಬ್ಬಂದಿ ನಮ್ಮಲ್ಲಿದ್ದಾರೆ. ಅವರೆಲ್ಲರಿಗೂ ತೀವ್ರ ಸಮಸ್ಯೆ ಉಂಟಾಗಿದೆ. ನಾವು ಸಂಘಟನೆಯ ಮೂಲಕ ನಿರಂತರವಾಗಿ ಫಾಲೋ ಅಪ್ ಮಾಡುತ್ತಿದ್ದೇವೆ. ರಾಜ್ಯದಿಂದ ಹಣ ಬಿಡುಗಡೆ ಮಾಡಲಾಗಿದ್ದು, ಶೀಘ್ರ ಸಿಬ್ಬಂದಿ ಖಾತೆಗೆ ವರ್ಗಾಯಿಸುವ ಭರವಸೆಯನ್ನು ಅಽಕಾರಿಗಳು ನೀಡಿದ್ದಾರೆ.
ಗಂಗಾ ನಾಯ್ಕ
ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ