ಸಿದ್ದಾಪುರದ ಶಂಕರಮಠದಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶವನ್ನು ಎಂ.ಆರ್.ಕುಲಕರ್ಣಿ ಉದ್ಘಾಟಿಸಿದರು. ಚಂದ್ರಕಲಾ ನಾಯ್ಕ, ದಿನೇಶ ಎಂ, ಗೀತಾ ಸಿರ್ಸಿಕರ್, ವತ್ಸಲಾ ಹೆಗಡೆ, ಲಕ್ಞ್ಮೀರಾಜು, ಡಾ. ರಶಿಮಿ ಹಿರೇಮಠ, ಗಿರೀಶ ಜಿ.ಪಿ. ಇತರರಿದ್ದರು. 
ಉತ್ತರ ಕನ್ನಡ

ಸಮಾಜದ ಸ್ವಾಸ್ಥ್ಯಕಾಪಾಡುವ ಕಾರ್ಯ ಶ್ಲಾಘನೀಯ

ಸಿದ್ದಾಪುರ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಂಕಲ್ಪ ಕಾರ್ಯಕ್ರಮ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಮಹಿಳೆಯರಲ್ಲಿ ದೈರ್ಯವನ್ನು ತುಂಬುವಂತಹ ಉತ್ತಮ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.
ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ತಾಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರ ಸಮಗ್ರ ಆರೋಗ್ಯ ಮಾಹಿತಿ ಕುರಿತು ಆಯೋಜಿಸಲಾಗಿದ್ದ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ದಿನೇಶ ಎಂ.ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರು ವಿಶೇಷ ಸಾಧನೆ ಮಾಡಿದ್ದಾರೆ. ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮತ್ತಷ್ಟು ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂದರು.
ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಲಕ್ಷ್ಮಿರಾಜು, ಪಿಎಸ್‌ಐ ಗೀತಾ ಸಿರ್ಸಿಕರ್ ಮಾತನಾಡಿದರು. ತಾಲೂಕು ಯೋಜನಾಧಿಕಾ ಗಿರೀಶ ಜಿ.ಪಿ, ಕೃಷಿ ಮೇಲ್ವಚಾರಕ ಮಹಾದೇವ, ಮೇಲ್ವಿಚಾರಕಿ ಪೂರ್ಣಿಮಾ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಲಲಿತಾ, ಸಂಯೋಜಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿದ್ದಾಪುರದ ಮಹಿಳಾ ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ವತ್ಸಲಾ ಹೆಗಡೆ, ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಶ್ಮಿ ಹಿರೇಮಠ ಮಹಿಳೆಯರ ದಿನಚರಿ, ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜ್ಞಾನ ವಿಕಾಸ ಕೇಂದ್ರದ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಎರಡು ಹೊಸ ಜ್ಞಾನ ವಿಕಾಸ ಕೇಂದ್ರಗಳಿಗೆ ದಾಖಲಾತಿ ಹಸ್ತಾಂತರ, ಸಹಾಯಧನ ಮಂಜೂರಾತಿ ಪತ್ರ ಹಾಗೂ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ, ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ರಂಗೋಲಿ, ಆರತಿ ತಟ್ಟೆ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.