ಮುಂಡಗೋಡ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಾಜಿ ಶಾಸಕ ವಿ.ಎಸ್. ಪಾಟೀಲ ಇತರರಿದ್ದರು. 
ಉತ್ತರ ಕನ್ನಡ

ಆಡಳಿತದಲ್ಲಿ (Administration) ಸರ್ಕಾರಿ ನೌಕರರ ಪಾತ್ರ ದೊಡ್ಡದು

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ನೌಕರರ ಭವನದ ಕಟ್ಟಡ ಉದ್ಘಾಟನೆ
  • ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಭಿಪ್ರಾಯ
  • ಖಾಲಿ ಹುದ್ದೆ ಭರ್ತಿಯಾದರೆ ಹೆಚ್ಚು ನೌಕರರಿಗೆ ಅನುಕೂಲ
ಮುಂಡಗೋಡ: ರಾಜ್ಯ ಸರ್ಕಾರವೂ ಉತ್ತಮವಾದ ಆಡಳಿತ (Administration) ನಡೆಸಲು ಸರ್ಕಾರಿ ನೌಕರರ ಪಾತ್ರ ಬಹು ಮುಖ್ಯವಾಗಿರುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ನೌಕರರ ಭವನದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 
ರಾಜ್ಯ ಸರ್ಕಾರಿ ನೌಕರರ ಸಂಗವೂ ಬಲಿಷ್ಠವಾಗಿದೆ. ನಮ್ಮ ಸಂಘವೂ ನೌಕರರಿಗೆ ಹತ್ತು ಹಲವು ಅನುಕೂಲತೆ ಮಾಡಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಮತ್ತಷ್ಟು ಸೌಕರ್ಯಗಳನ್ನು ಒದಗಿಸಲು ಶ್ರಮ ವಹಿಸಲಾಗುವುದು. 
ರಾಜ್ಯದಲ್ಲಿ 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಇದರಿಂದ ಈಗಿರುವ ನೌಕರರಿಗೆ ಹೆಚ್ಚುವರಿ ಕೆಲಸ ಮಾಡುವಂತಾಗಿದೆ. ಹಿಂದಿನ ಹಾಗೂ ಇಂದಿನ ಸರ್ಕಾರಕ್ಕೆ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ತಿಳಿಸಿದರೂ ನಿರ್ಲಕ್ಷೃವಹಿಸಿದ್ದಾರೆ. ಖಾಲಿ ಹುದ್ದೆ ಭರ್ತಿಯಾದರೆ ಹೆಚ್ಚು ನೌಕರರಿಗೆ ಅನುಕೂಲವಾಗಲಿದೆ. ಪ್ರತಿಯೊಬ್ಬ ನೌಕರನು ಉತ್ತಮವಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ತಂದೆ-ತಾಯಿಯ ಗೌರವ ಹೆಚ್ಚಿಸಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ ನನ್ನ ಕ್ಷೇತ್ರದಲ್ಲಿ ನೌಕರರ ಹಾಗೂ ಸಾರ್ವಜನಿಕರ ಮಧ್ಯ ಉತ್ತಮವಾದ ಬಾಂಧವ್ಯವಿದೆ. ಕಾರ್ಯಾಂಗ ಸರಿಯಾಗಿ ಕಾರ್ಯನಿರ್ವಹಿಸದೆ ಮಾತ್ರ ಶಾಸಕಾಂಗ ಸಮರ್ಪವಾಗಿ ಮುಂದೆ ಸಾಗುತ್ತದೆ ಎಂದರು.
ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ ಜನಪ್ರತಿನಿಧಿಗಳು ಅಧಿಕಾರ 5 ವರ್ಷ ಮಾತ್ರ ಆದರೆ, ಸರ್ಕಾರಿ ನೌಕರರ ಅವಧಿ 60 ವರ್ಷವಿರುತ್ತದೆ. ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸರ್ಕಾರಕ್ಕೆ ಉತ್ತಮವಾದ ಹೆಸರು ಬರುತ್ತದೆ ಎಂದರು. 
ಹತ್ತನೆ ತರಗತಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ನೌಕರರ ಮಕ್ಕಳಿಗೆ ಸನ್ಮಾನಿಸಲಾಯಿತು. ಸಂಘದ ಹಳೆದ ಪದಾಧಿಕಾರಿಗಳನ್ನು ಗೌರವಿಸಲಾಯಿತು. 
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು, ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜಿವಕುಮಾರ ಎಸ್. ನಾಯ್ಕ, ಕಿರಣಕುಮಾರ ನಾಯ್ಕ, ತಾಲೂಕಾಧ್ಯಕ್ಷ ಸುಭಾಸ ಡೋರಿ, ತಹಸೀಲ್ದಾರ್ ಶಂಕರ ಗೌಡಿ, ಶಿಕ್ಷಣಾಧಿಕಾರಿ ಜಿ. ಸುಮಾ, ನೌಕರರ ಸಂಘದ ಪದಾಧಿಕಾರಿಗಳಾದ ಎಸ್.ಬಸವರಾಜ, ಮಲ್ಲಿಕಾರ್ಜುನ ಬಳ್ಳಾರಿ,  ದಯಾನಂದ ನಾಯ್ಕ, ರಾಘವೇಂದ್ರ ಗಿರಡ್ಡಿ, ಸಂಘದ ಪದಾಧಿಕಾರಿಗಳಿದ್ದರು.