ದಾಂಡೇಲಿ ನಗರದ ಕರ್ನಾಟಕ ಸಂಘದಿಂದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ factory ಮಾಲೀಕ ಶ್ರೀಕುಮಾರ್ ಬಂಗೂರ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು. 
ಉತ್ತರ ಕನ್ನಡ

factory ಕಾರ್ಖಾನೆ ಪ್ರಗತಿಗೆ ದಾಂಡೇಲಿ ಜನತೆ ಕೊಡುಗೆ ಅಪಾರ

ದಾಂಡೇಲಿ: ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ factory ಪ್ರಗತಿಗೆ ದಾಂಡೇಲಿ ಜನತೆಯ ಕೊಡುಗೆ ಅಪಾರವಾಗಿದೆ ಎಂದು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಮಾಲೀಕ ಶ್ರೀಕುಮಾರ್ ಬಂಗೂರ ಹೇಳಿದರು.
ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್‌ಆರ್ ಯೋಜನೆಯಡಿ 53 ಲಕ್ಷ ರೂ. ವೆಚ್ಚದಲ್ಲಿ ನಗರದ ಕರ್ನಾಟಕ ಸಂಘದ ನವೀಕರಣಗೊಂಡ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಗದ ಕಾರ್ಖಾನೆಗೆ ಎಲ್ಲವನ್ನೂ ಕೊಟ್ಟ ದಾಂಡೇಲಿಯ ಪ್ರಗತಿಗೆ ಕಾಗದ ಕಾರ್ಖಾನೆಯೂ ತನ್ನದೆ ಆದ ಕೊಡುಗೆ ನೀಡಬೇಕಾಗಿರುವುದು ನಮ್ಮ ಜವಾಬ್ದಾರಿಯೂ ಆಗಿದೆ.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯೂ ತನ್ನ ಸಿಎಸ್‌ಆರ್ ಯೋಜನೆಯಡಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಕ್ರೀಡಾ ಕ್ಷೇತ್ರದ ಅಭ್ಯುದಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕಾಗದ ಕಾರ್ಖಾನೆಯೂ ಸಮಾಜಮುಖಿ ಸೇವಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುತ್ತಿದೆ ಎಂದರು.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಮಾತನಾಡಿ, ಕಾರ್ಖಾನೆ ಮಾಲೀಕ ಶ್ರೀಕುಮಾರ್ ಬಂಗೂರ ಅವರ ಮಾರ್ಗದರ್ಶನದಂತೆ ಕಾರ್ಖಾನೆಯ ಪ್ರಗತಿಯ ಜತೆಗೆ ಈ ಭಾಗದ ಪ್ರಗತಿಗೂ ಅತ್ಯಂತ ಬದ್ಧತೆಯಿಂದ ಕಾರ್ಖಾನೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.
ಕರ್ನಾಟಕ ಸಂಘದ ಪ್ರಭಾರಿ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ದಾಂಡೇಲಿಯ ಜನತೆಯ ಜೀವನಾಡಿಯಾಗಿರುವ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಸಿಎಸ್‌ಆರ್ ಯೋಜನೆಯ ಮೂಲಕ ಮಾಡುತ್ತಿರುವ ಕಾರ್ಯ ಚಟುವಟಿಕೆಗಳು ಶ್ಲಾಘನೀಯವಾಗಿವೆ ಎಂದರು.
ಡಿವೈಎಸ್ಪಿ ಶಿವಾನಂದ ಮದರಕಂಡಿ, ಶಶಿದೇವಿ ಬಂಗೂರ, ವೀರೇಂದ್ರ ಬಂಗೂರ, ಆರ್ಯನ್ ಮತ್ತು ಶ್ರೀವತ್ಸ ಉಪಸ್ಥಿತರಿದ್ದರು.
ಶ್ರೀಕುಮಾರ್ ಬಂಗೂರ ಹಾಗೂ ಅವರ ಕುಟುಂಬಸ್ಥರನ್ನು ವಿವಿಧ ಸಂಘಟನೆಗಳು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ಸ್ವಾಗತಿಸಿದರು. ಆರ್.ಪಿ. ನಾಯ್ಕ ವಂದಿಸಿದರು. ಪತ್ರಕರ್ತ ಸಂದೇಶ್ ಎಸ್. ಜೈನ್ ನಿರೂಪಿಸಿದರು.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಜೆ.ಆರ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಹಾಗೂ ವಿಭಾಗದ ಸಿಬ್ಬಂದಿಗಳು ಸಹಕರಿಸಿದರು.