ಯಾಣದಲ್ಲಿ ಭೈರವೇಶ್ವರ ಶಿಲಾಶಿಖರದ ಅಂಚೆ ಕಾರ್ಡನ್ನು ಸಿಪಿಎಂಜಿ ಕೆ. ಪ್ರಕಾಶ ಬಿಡುಗಡೆಗೊಳಿಸಿದರು. ರಾಮಚಂದ್ರ ಭಟ್​, ಈಶ್ವರ ಭಟ್​, ಹರ್ಷ ಎನ್​., ಧನಂಜಯ ಆಚಾರ್​ ಇದ್ದರು. 
ಉತ್ತರ ಕನ್ನಡ

ಅಂಚೆ ಕಾರ್ಡ್​ನಲ್ಲಿ ಯಾಣದ ಮುಖ್ಯ ಶಿಲಾಶಿಖರ

ಕುಮಟಾ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀೇತ್ರ ಯಾಣದ ಶ್ರೀ ಗಂಗಾ&ಚಂಡಿಕಾ ಭೆರವೇಶ್ವರ ಮಂದಿರದಲ್ಲಿ ಗುರುವಾರ ಭಾರತೀಯ ಅಂಚೆ ಇಲಾಖೆ ವತಿಯಿಂದ ಯಾಣದ ಮುಖ್ಯ ಶಿಲಾಶಿಖರದ ಭವ್ಯ ಚಿತ್ರಣವುಳ್ಳ ಅಂಚೆ ಕಾರ್ಡ್​(ಪಿಕ್ಚರ್​ ಪೋಸ್ಟ್​ ಕಾರ್ಡ್​) ಮತ್ತು ಕಾಯಂ ಸಚಿತ್ರ ರದ್ಧತಿ ಮುದ್ರೆ(ಪರ್ಮನೆಂಟ್​ ಪಿಕ್ಚೋರಿಯಲ್​ ಕ್ಯಾನ್ಸಲೇಷನ್​)ನ್ನು ಬಿಡುಗಡೆಗೊಳಿಸಲಾಯಿತು.
ಯಾಣ ಶಿಲಾಶಿಖರದ ಅಂಚೆ ಕಾರ್ಡನ್ನು ಅಂಚೆ ಕರ್ನಾಟಕ ವತ್ತದ ಚೀ್​ ಪೋಸ್ಟ್​ ಮಾಸ್ಟರ್​ ಜನರಲ್​(ಸಿಪಿಎಂಜಿ) ಬೆಂಗಳೂರಿನ ಕೆ. ಪ್ರಕಾಶ್​ ಅವರು ಬಿಡುಗಡೆಗೊಳಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ತಾಣಗಳಲ್ಲೊಂದಾಗಿ ವಿಶ್ವಪ್ರಸಿದ್ಧಿಯನ್ನು ಪಡೆದಿರುವ ಯಾಣದ ಪೌರಾಣಿಕ ಹಾಗೂ ಪ್ರಾಕತಿಕ ವಿಶೇಷತೆಯನ್ನು ಅಂಚೆ ಕಾಡಿರ್ನ ಮೇಲೆ ದಾಖಲಿಸಿದ ವಿಶಿಷ್ಟ ಮತ್ತು ಐತಿಹಾಸಿಕ ಣಕ್ಕೆ ನಾವೆಲ್ಲಾ ಸಾಯಾಗಿದ್ದೇವೆ ಎಂದರು.
ಅತಿಥಿಗಳಾದ ಶ್ರೀಗಂಗಾ&ಚಂಡಿಕಾ ಭೆರವೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯ ರಾಮಚಂದ್ರ ಜಿ.ಭಟ್​ ಹಾಗೂ ಟ್ರಸ್ಟಿ ಈಶ್ವರ ವಿ. ಭಟ್​ ಮಾತನಾಡಿ, ಯಾಣದ ಭವ್ಯತೆಯನ್ನು, ಮಹತ್ವವನ್ನು ಗುರುತಿಸಿ ಅಂಚೆ ಇಲಾಖೆಯ ಕಾಡಿರ್ನಲ್ಲಿ ಪ್ರಚುರಪಡಿಸಿರುವುದು ನಮ್ಮೆಲ್ಲರಿಗೆ ಅಭಿಮಾನದ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ಉತ್ತರ ಕರ್ನಾಟಕ ವಲಯದ ಧಾರವಾಡ ಅಂಚೆ ಸೇವಾ ನಿರ್ದೇಶಕ ಹರ್ಷ ಎನ್​. ಹಾಗೂ ಅಧ್ಯತೆ ವಹಿಸಿದ್ದ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ ಧನಂಜಯ ಆಚಾರ್​ ಮಾತನಾಡಿದರು. ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ, ಭಜಕರು, ಗ್ರಾಮಸ್ಥರು ಹಾಗೂ ಅಂಚೆ ಇಲಾಖೆಯವರು ಹಾಜರಿದ್ದರು.
ಭಾರತೀಯ ಭೂವೆಜ್ಞಾನಿಕ ಸಮೀೆಯು ಯಾಣವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಭೂ ಪರಂಪರೆಯ ತಾಣ ಎಂದು ೂಷಿಸಿದ ಬೆನ್ನಲ್ಲೇ ಅಂಚೆ ಇಲಾಖೆಯ ವತಿಯಿಂದ ಯಾಣದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಅಂಚೆ ಕಾರ್ಡ್​ ಬಿಡುಗಡೆಗೊಳಿಸಲಾಗಿದೆ.