ಶಿರಸಿಯಲ್ಲಿ ಆಯೋಜಿಸಿದ್ದ ಕಜ್ಜಾಯ ಕಂಬಳದಲ್ಲಿ ಮಹಿಳೆಯರು ರುಚು ರುಚಿ ಚೌತಿ ತಿಂಡಿಗಳನ್ನು ಮಾರುತ್ತಿರುವುದು. 
ಉತ್ತರ ಕನ್ನಡ

ಶಿರಸಿಯಲ್ಲಿ ಮೇಳೈಸಿದ ಚೌತಿ ತಿಂಡಿಗಳ ಘಮ

ಪ್ರಮುಖ ಮುಖ್ಯಾಂಶಗಳು

  • ತೋಟಿಗರ ಕಲ್ಯಾಣ ಮಂಟಪದಲ್ಲಿ "ಮಲೆನಾಡ ಸೊಗಡು&ಕಜ್ಜಾಯ ಕಂಬಳ' ಆಯೋಜನೆ
ಶಿರಸಿ: ದಶಕಗಳ ಹಿಂದೆ ಮಲೆನಾಡಿನ ಮನೆಗಳಲ್ಲಿ ಗಣೇಶ ಚತುರ್ಥಿ ದಿನದಂದು ಗಣೇಶನಿಗೆ 21ಕ್ಕೂ ಅಧಿಕ ರೀತಿಯ ತಿಂಡಿಗಳನ್ನು ಸಿದ್ಧಪಡಿಸಿ ನೈವೇದ್ಯ ಮಾಡುತ್ತಿದ್ದರು. ವಿಶೇಷವಾಗಿ ಗಣೇಶ ಚೌತಿಗಾಗಿಯೇ ಸಿದ್ಧಪಡಿಸುವ ತಿಂಡಿಗಳಿರುತ್ತಿದ್ದವು. ಇಂದು ಕಾಲ ಬದಲಾಗಿದೆ. ಯುವ ಜನತೆ ಮಹಾನಗರಳತ್ತ ವಲಸೆ ಹೋದ ಮೇಲೆ ಹಳ್ಳಿಗಳಲ್ಲಿಯೂ ಗಣೇಶ ಚೌತಿಯ ತಿಂಡಿಯ ಪ್ರಮಾಣ ಣಿಸಿದೆ. ವೈವಿಧ್ಯತೆಯೂ ಮರೆಯಾಗತೊಡಗಿದೆ. ಹಿಂದಿನ ತಿಂಡಿ ವೈಭವವನ್ನು ಮತ್ತೆ ನೆನಪಿಸಿ, ಉತ್ತೇಜಿಸುವ ದೃಷ್ಟಿಯಿಂದ ನಗರದ ತೋಟಿಗರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ "ಮಲೆನಾಡ ಸೊಗಡು&ಕಜ್ಜಾಯ ಕಂಬಳ' ಸಾರ್ವಜನಿಕರನ್ನು ಆಕಷಿರ್ಸುವಲ್ಲಿ ಯಶಸ್ವಿಯಾಯಿತು.
ಕಲ್ಯಾಣ ಮಂಟಪದ ತುಂಬೆಲ್ಲ ಚೌತಿಯ ಕಜ್ಜಾಯಗಳ ಮ ಮ ವಾಸನೆ ಹಬ್ಬಿತ್ತು. ಮಲೆನಾಡಿನ ತಾಲೂಕುಗಳ ಮೂಲೆ ಮೂಲೆಯಿಂದ ಆಗಮಿಸಿದ್ದ ಮಹಿಳೆಯರು ಚಕ್ಕುಲಿ, ಅತ್ರಾಸಕ, ಕೋಡುಬಳೆ, ಕಜಿರ್ಕಾಯಿ ಸೇರಿದಂತೆ 30ಕ್ಕೂ ಅಧಿಕ ವಿಧದ ತಿಂಡಿಗಳನ್ನು ಸಿದ್ಧಪಡಿಸಿ ತಂದಿದ್ದರು. ಒಂದೆಡೆ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದ್ದರೆ, ಇನ್ನೊಂದಿಷ್ಟು ಮಹಿಳೆಯರು ಸ್ಪರ್ಧೆಗಾಗಿ ಈ ರುಚಿಕರ ತಿಂಡಿಗಳನ್ನು ಸಿದ್ಧಪಡಿಸಿ ತಂದಿದ್ದರು. ಕಾರ್ಯಕ್ರಮಕ್ಕೆ ತೋಟಗಾರರ ಕಲ್ಯಾಣ ಸಂದ ಉಪಾಧ್ಯ ಎಂ.ವಿ. ಜೋಶಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವೇದಾ ಹೆಗಡೆ ನೀರ್ನಳ್ಳಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಇಂದಿನ ಜನತೆ ತಮ್ಮ ಬಿಡುವಿಲ್ಲದ ಕೆಲಸದಲ್ಲಿ ಹಿಂದಿನ ದಿನಗಳ ತಿಂಡಿ ತಯಾರಿಸುವ ವಿಧಾನವನ್ನೇ ಮರೆತಿದ್ದಾರೆ. ಹೀಗಾಗಿ, ಹಳೆಯ ತಿಂಡಿಗಳನ್ನು ಮತ್ತೆ ಉತ್ತೇಜಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಅಂಜನಾ ಭಟ್​ ಮಾತನಾಡಿ, ಸಾಂಪ್ರದಾಯಿಕ ಕಜ್ಜಾಯಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಹಳೇ ತಿಂಡಿಗಳನ್ನು ತಯಾರಿಸುವುದೂ ಒಂದು ಕಲೆ. ಗೃಹೋದ್ಯೋಗ ಮಾಡಲೂ ಈ ತಿಂಡಿಗಳ ತಯಾರಿಕೆಯನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ. ಮುಂಬರುವ ಹಬ್ಬಕ್ಕೆ ಪೂರ್ವ ಸಿದ್ಧತೆ ಎಂಬಂತೆ ಈ ಮೇಳವನ್ನು ಹಬ್ಬದ ರೀತಿಯಲ್ಲಿ ಆಚರಿಸಿದ್ದೇವೆ ಎಂದರು.
ಆಕಷಿರ್ಸಿದ ಕೈ ಚೆಕ್ಕುಲಿ
ಹಿಂದಿನ ಕಾಲದಲ್ಲಿ ಚಕ್ಕುಲಿಯನ್ನು ಕೈನಲ್ಲೇ ಸುತ್ತಿ ಬೇಯಿಸುತ್ತಿದ್ದರು. ಈ ಕಲೆ ಇಂದು ಬಹುತೇಕ ಮಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಉತ್ತೇಜಿಸುವ ಉದ್ದೇಶದಿಂದ ಕೈಚಕ್ಕುಲಿ ತಯಾರಿಕೆ ತರಬೇತಿ ಹಾಗೂ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. 35ಕ್ಕೂ ಅಧಿಕ ಜನರು ಸ್ಪರ್ಧೆ ಮತ್ತು ತರಬೇತಿಯಲ್ಲಿ ಪಾಲ್ಗೊಂಡರು. ಇದೇ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೂವಿನ ಗಿಡಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ವೇದಿಕೆ ಮಾಡಿಕೊಡಲಾಗಿತ್ತು.