ಜನಜಾಗತಿ ವೇದಿಕೆ ಶಿರಸಿಯ ತೆಮಾಸಿಕ ಸಭೆಗೆ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಚಾಲನೆ ನೀಡಿದರು. ವಿವೇಕ ರಾಯ್ಕರ್​, ಡಿ.ಎನ್​. ಗಾಂವಕರ್​, ಸುಭಾಷ ನಾಯ್ಕ ಇತರರಿದ್ದರು. 
ಉತ್ತರ ಕನ್ನಡ

ರಾಮರಾಜ್ಯದ ಕನಸು ಜನಜಾಗೃತಿ ವೇದಿಕೆಯಿಂದ ನನಸು

ಶಿರಸಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್​ ಶಿರಸಿ ಜಿಲ್ಲೆಯ ತೆಮಾಸಿಕ ಸಭೆ ನಗರದ ಯೋಜನಾ ಕಚೇರಿಯ ಸಭಾಭವನದಲ್ಲಿ ಬುಧವಾರ ಜರಗಿತು.
ಕಾರ್ಯಕ್ರಮವನ್ನು ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಉದ್ಘಾಟಿಸಿ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರ ರಾಮ ರಾಜ್ಯದ ಕನಸನ್ನು ಜನಜಾಗೃತಿ ವೇದಿಕೆ ನನಸು ಮಾಡುತ್ತಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ನಿಮ್ಮೆಲ್ಲರ ಪಾತ್ರ ಬಹಳ ಮುಖ್ಯ ಎಂದರು.
ಜನಜಾಗೃತಿ ವೇದಿಕೆಯ ಕಾರ್ಯದಶಿರ್ ಜಿಲ್ಲಾ ನಿರ್ದೇಶಕ ದಿನೇಶ್​ ಎಂ. ಅವರು ಜನಜಾಗತಿ ವೇದಿಕೆಯ 2026&27 ನೇ ಸಾಲಿನ ಕ್ರಿಯಾಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಿ ವಾಷಿರ್ಕವಾಗಿ ಜಿಲ್ಲೆಯಲ್ಲಿ ಒಟ್ಟು 3 ಮದ್ಯವರ್ಜನ ಶಿಬಿರಗಳ ಆಯೋಜನೆ, 90 ಶಾಲಾ ಕಾಲೇಜುಗಳಲ್ಲಿ ಸ್ವಾಸ್ಯ ಸಂಕಲ್ಪ ಕಾರ್ಯಕ್ರಮದಿಂದ ವಿದ್ಯಾಥಿರ್ಗಳಿಗೆ ದುಶ್ಚಟಗಳ ದುಷ್ಪರಿಣಾಮದ ಬಗ್ಗೆ ಅರಿವು, ಮೇ 31ರಂದು ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಜೂನ್​ 26 ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ನವ ಜೀವನೋತ್ಸವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದರು.
ಜನಜಾಗೃತಿ ವೇದಿಕೆಯ ಶಿರಸಿ ಜಿಲ್ಲಾ ಅಧ್ಯ ಕಾಳಿಂಗ ರಾಜ್​ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಕ್ಕೆ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾ ಸಂಟನಾ ಅಧ್ಯರಾಗಿ ಗೌರಿ ರಾಜು ನಾಯಕ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯರಾಗಿ ಜಿಲ್ಲೆಯ ಪ್ರತಿ ತಾಲೂಕುಗಳಿಂದ ಒಬ್ಬರನ್ನು ಆಯ್ಕೆ ಮಾಡಲಾಯಿತು. ಶಿರಸಿ ತಾಲೂಕಿನ ಸುಧೀರ್​ ನಾಯರ್​, ಸಿದ್ದಾಪುರದಿಂದ ರಮೇಶ್​ ಹಾಸಿರ್ಮನೆ, ಮುಂಡಗೋಡದಿಂದ ಬಸವರಾಜ್​ ನಡುವಿನಮನೆ, ಸೊರಬದಿಂದ ಸುಧಾ, ಶಿಕಾರಿಪುರದಿಂದ ಪ್ರೇಮ, ಸಾಗರದಿಂದ ಕಸ್ತೂರಿ ಸಾಗರ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಪೂರ್ವ ಜಿಲ್ಲಾ ಅಧ್ಯ ವಿವೇಕ್​ ರಾಯ್ಕರ್​, ಡಿ.ಎನ್​. ಗಾವಂಕರ್​, ಸುಭಾಷ್​ ನಾಯಕ, ಪ್ರೇಮ್​ ಕುಮಾರ, ಹಾಗೂ ಶಿಕಾರಿಪುರ, ಸೊರಬ, ಸಾಗರ, ಸಿದ್ದಾಪುರ, ಯಲ್ಲಾಪುರ ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಎಲ್ಲ ಜನಜಾಗತಿ ಸದಸ್ಯರು, ತಾಲೂಕು ಯೋಜನಾಧಿಕಾರಿಗಳು, ಜಿಲ್ಲಾ ಪ್ರಬಂಧಕರು ಉಪಸ್ಥಿತರಿದ್ದರು.
ಜನಜಾಗೃತಿ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್​ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಜಯಂತಿ ಸ್ವಾಗತಿಸಿದರು. ಶಿಕಾರಿಪುರ ಯೋಜನಾಧಿಕಾರಿ ನಂಜುಂಡಿ ವಂದಿಸಿದರು.