ಹೊನ್ನಾವರ ಉಪ್ಪೋಣಿಯ ಶ್ರೀ ನಾಗ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ (kartikotsava) ನಡೆಯಿತು. 
ಉತ್ತರ ಕನ್ನಡ

ದೀಪದಿಂದ ಅಜ್ಞಾನ ಕತ್ತಲು ದೂರ Kartikotsava

ಹೊನ್ನಾವರ: ಉಪ್ಪೋಣಿಯ ಶ್ರೀ ನಾಗ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ (Kartikotsava) ಅದ್ದೂರಿಯಾಗಿ ಜರುಗಿತು.
ಈ ವೇಳೆ ದೇವಾಲಯದ ಪ್ರಧಾನ ಅರ್ಚಕ ರವಿ ನಾಯ್ಕ ಮಾತನಾಡಿ, ಇಷ್ಟಾರ್ಥ ಕರುಣಿಸುವ ದೇವಿಯ ಆಲಯದಲ್ಲಿ ದೀಪೋತ್ಸವವು ಹಲವಾರು ವರ್ಷಗಳಿಂದ ಆಚರಣೆಯಲ್ಲಿದೆ.
ದೀಪವು ಧಾರ್ಮಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವ ಹೊಂದಿದ್ದು, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುತ್ತದೆ ಎಂಬ ನಂಬಿಕೆಯೂ ಇದೆ ಎಂದರು. 
ಸಾಮೂಹಿಕ ದೀಪಾರಾಧನೆಗೆ ಛಾಯಾಚಿತ್ರಗ್ರಾಹಕ ಹೊದ್ಕೆಶಿರೂರಿನ ಸುಧಾಕರ ಮತ್ತು ಚಂದ್ರಿಕಾ ನಾಯ್ಕ ದಂಪತಿ ಚಾಲನೆ ನೀಡಿದರು.
ದೇವಸ್ಥಾನದ ವತಿಯಿಂದ ನಾಯ್ಕ ದಂಪತಿಯನ್ನು ಸನ್ಮಾನಿಸಲಾಯಿತು. ಮಾಧ್ಯಮ ಪ್ರತಿನಿಧಿಗಳಾದ ಭವಾನಿಶಂಕರ ನಾಯ್ಕ ಮತ್ತು ಉಷಾ ನಾಯ್ಕ ದಂಪತಿ, ಸುಧೀರ ಕಡ್ನೀರು, ನಾಗೇಂದ್ರ ನಾಯ್ಕ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಮಹಾಪೂಜೆಯ ಬಳಿಕ ಭಕ್ತರು ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.