ಹರಿದ್ವಾರದಲ್ಲಿರುವ ಸಾಧನಾ ಕುಟೀರದ 9ನೇ ವಾರ್ಷಿಕೋತ್ಸವದ ಧಾರ್ಮಿಕ Religion ಸಭಾ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. 
ಉತ್ತರ ಕನ್ನಡ

Religion ಧರ್ಮ ಪಾಲನೆ ಸನಾತನದ ಮೂಲ ಉದ್ದೇಶ

ಮಂಜುನಾಥ ಕೆಂಪಸಣ್ಣವರ
ಭಟ್ಕಳ: ಜಾತಿ ಮತ ಪಕ್ಷ ಮರೆತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಧರ್ಮ (Religion) ಪಾಲನೆ ಮಾಡುವುದು ಸನಾತನ ಧರ್ಮದ ಮೂಲ ಉದ್ದೇಶವಾಗಿದೆ ಎಂದು ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ 1008 ಮಹಾಮಂಡಲೇಶ್ವರ ಸ್ವಾಮೀಜಿ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಹರಿದ್ವಾರದಲ್ಲಿರುವ ಸಾಧನಾ ಕುಟೀರದ 9ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸನಾತನ ಧರ್ಮವು ಸಾಧು ಸಂತರ ನಿಸ್ವಾರ್ಥ ಧರ್ಮ ಪರಿಪಾಲನೆಯಿಂದ ಉಳಿದಿದೆ. ಸಾಧು ಸಂತರಿಗೆ ಎಲ್ಲರೂ ಒಂದೇ. ಇಲ್ಲಿ ಮೇಲು ಮೇಲು- ಕೀಳು ಎಂಬ ಬೇಧ ಭಾವ ಇಲ್ಲ.
ಹರಿದ್ವಾರದಲ್ಲಿ 9 ವರ್ಷಗಳ ಹಿಂದೆ ಮಠವನ್ನು ಭಕ್ತರ ಸಹಕಾರದಿಂದ ಸ್ಥಾಪಿಸಿದ್ದು, ಅಯೋಧ್ಯೆಯಲ್ಲಿಯೂ ಮಠದ ಸ್ಥಾಪನೆ ಕಾರ್ಯ ಮುಂದುವರಿದೆ ಎಂದರು.
ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮಾತನಾಡಿ, ಭಕ್ತರ ಅನುಕೂಲಕ್ಕಾಗಿ ಗುರುಗಳು ದಕ್ಷಿಣ ಭಾರತದಿಂದ ಇಲ್ಲಿಗೆ ಬಂದು ಮಠ ವನ್ನು ಸ್ಥಾಪಿಸಿದ್ದಾರೆ. ಅವರ ಕಾರ್ಯಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು. ತಿರುಪತಿಯಲ್ಲಿಯೂ ಮಠ ಸ್ಥಾಪಿಸುವ ಹಂಬಲವಿದ್ದು, ಅದು ಶೀಘ್ರದಲ್ಲಿ ನೆರವೇರಲಿದೆ ಎಂದರು.
ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಮಹೇಶ ಗುರೂಜಿ, ಇಂದ್ರಾನಂದ ಸ್ವಾಮೀಜಿ, ಶಾಸಕ ಭೀಮಣ್ಣ ನಾಯ್ಕ, ಬೆಳ್ತಂಗಡಿ ಶಾಸಕ ಹರೀಶ ಪೂಂಜ, ಉದ್ಯಮಿ ಗೋವಿಂದ ಪೂಜಾರಿ, ಉತ್ತರಕಾಂಡ ರಾಜ್ಯದ ಮಾಜಿ ಸಚಿವ ಮದನ್ ಕೌಶಿಕ್ ಮಾತನಾಡಿದರು.
ಭಟ್ಕಳ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ವೆಂಕಟೇಶ ನಾಯಕ್ ಶಿರಸಿ, ಗೋವಿಂದ ನಾಯ್ಕ, ಈಶ್ವರ ನಾಯ್ಕ, ಮಾಸ್ತಪ್ಪ ನಾಯ್ಕ, ಎಂ.ಎಚ್. ನಾಯ್ಕ ಕುಮಟಾ, ವಾಮನ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಉಪಸ್ಥಿತರಿದ್ದರು