ಸಿದ್ದಾಪುರದಲ್ಲಿ ಕೇಂದ್ರಿಯ ಸೇನಾ ಪಡೆಗೆ ಆಯ್ಕೆ ಆಗಿರುವ ಸ್ವಪ್ನಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಾರಾಯಣ ನಾಯ್ಕ ದಂಪತಿ, ಡಾ. ಸ್ಫೂರ್ತಿ, ಕೃಷ್ಣ ನಾಯ್ಕ, ಎಂ.ಡಿ. ನಾಯ್ಕ, ಗಣೇಶ ಕೊಡಿಯಾ ಇತರರಿದ್ದರು.
ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ಸ್ವಪ್ನಾ ನಾರಾಯಣ ನಾಯ್ಕ ಕೇಂದ್ರಿಯ ಸೇನಾ ಪಡೆಗೆ ಆಯ್ಕೆಯಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಇವರು ಎಂಎಸ್‌ಎಸ್‌ಸಿ ಪದವೀಧರೆ. ಅತ್ಯುತ್ತಮ ಚಿತ್ರಕಲಾವಿದೆಯೂ ಆಗಿದ್ದು, ಕರಾಟೆ ಚಾಂಪಿಯನ್ ಡೊಜೋ ವಿದ್ಯಾರ್ಥಿನಿಯೂ ಆಗಿದ್ದು, ಬಿಎಸ್‌ಎಫ್‌ಗೆ ಆಯ್ಕೆಯಾಗಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾಲೂಕಾಸ್ಪತ್ರೆಯ ಖ್ಯಾತ ಮಕ್ಕಳ ತಜ್ಞೆ ಡಾ. ಸ್ಫೂರ್ತಿ ರಾಯ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದಲ್ಲಿ ಆಯೋಜಿಸಿದ್ದ ಸ್ವಪ್ನಾ ನಾಯ್ಕ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕ ಎಂ.ಡಿ. ನಾಯ್ಕ, ಮಾತನಾಡಿ, ಸ್ವಪ್ನಾ ಅವರ ಸರಳತೆಯನ್ನು ಶ್ಲಾಘಿಸಿ ಅವರ ತಂದೆ, ತಾಯಿಯ ಪರಿಶ್ರಮವನ್ನು ಶ್ಲಾಘಿಸಿದರು. ಚಾಂಪಿಯನ್ಸ್ ಡೊಜೋ ಅಧ್ಯಕ್ಷ ಕೃಷ್ಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕರಾಟೆ ಶಿಕ್ಷಕ ಕೃಷ್ಣ ನಾಯ್ಕ, ಶಿಕ್ಷಣ ಇಲಾಖೆಯ ಗಣೇಶ ಕೊಡಿಯಾ, ಪುನೀತ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.