ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಸುಮೇರು ದೀಪೋತ್ಸವವನ್ನು 'Sumeru Deepotsava' ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಿದರು. ಡಾ.ಕೆ.ಸಿ ನಾಗೇಶ ಭಟ್ಟ, ಡಾ.ನಿವೇದಿತಾ ಇತರರಿದ್ದರು. 
ಉತ್ತರ ಕನ್ನಡ

ಉಮ್ಮಚಗಿಯಲ್ಲಿ ಗಮನ ಸೆಳೆದ ‘ಸುಮೇರು ದೀಪೋತ್ಸವ’ 'Sumeru Deepotsava'

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಸ್ವರ್ಣವಲ್ಲೀ ಶ್ರೀಗಳಿಂದ ಚಾಲನೆ
  • ಕಾಶಿಯ ಗಂಗಾರತಿ ನೆನಪಿಸಿದ ಕಾರ್ಯಕ್ರಮ
ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ನಡೆದ ಸುಮೇರು ದೀಪೋತ್ಸವಕ್ಕೆ 'Sumeru Deepotsava' ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಚಾಲನೆ ನೀಡಿದರು. 
ಅತಿಥಿಗಳಾಗಿದ್ದ ಡಾ.ಎಂ.ಎಸ್. ಮಾರಿಗೊಳಿ, ಶ್ರೀನಿವಾಸ ಹೆಬ್ಬಾರ ಶಿರಸಿ, ನಾಗರಾಜ ಭಟ್ಟ, ಗಣೇಶ ಭಟ್ಟ, ಕೆ.ಆರ್. ಕಂಬಾರ್ ದಂಪತಿ ಶ್ರೀ ಚಕ್ರದೀಪವನ್ನು ಪ್ರಜ್ವಲಿಸಿದರು.
ಸಂಪೂರ್ಣ ಸುಮೇರು ವೃತ್ತದ ಸುತ್ತಲೂ 1800 ಹಣತೆಗಳು ಕ್ಷಣ ಮಾತ್ರದಲ್ಲಿ ಬೆಳಗುವ ಮೂಲಕ ಆಕರ್ಷಕವಾಗಿ ಕಂಡು ಬಂತು. ಜ್ಯೋತಿರ್ವನದ 48 ವೃಕ್ಷಗಳಿಗೂ ಅಳವಡಿಸಿದ್ದ ಸೌರ ದೀಪ ವಿಶೇಷ ಗಮನ ಸೆಳೆಯಿತು. 
ಗಾಯತ್ರೀ ಮಂತ್ರಾಕ್ಷರ ಸಹಿತ 40 ಅಡಿಯ ಬೃಹತ್ ಸೂರ್ಯಮಂಡಲ, ಗ್ರಹ ಮಂಡಲ ಮತ್ತು ಸಾವಿರಕ್ಕೂ ಹೆಚ್ಚು ನಕ್ಷತ್ರಗಳನ್ನು ರಚಿಸಿ ಲೋಕಾರ್ಪಣೆ ಮಾಡಲಾಗಿತ್ತು. ಒಂದನೇ ಶತಮಾನದಿಂದ ಇಪ್ಪತ್ತನೆಯ ಶತಮಾನದವರೆಗಿನ 50ಕ್ಕೂ ಹೆಚ್ಚು ಭಾರತೀಯ ಗಣಿತಜ್ಞರ ಭಾವಚಿತ್ರವನ್ನಿಟ್ಟು ದೀಪ ಬೆಳಗಿದ್ದು ವಿಶೇಷವಾಗಿತ್ತು.
ನಾಲ್ಕು ದಿಶೆಯಿಂದಲೂ ಧೂಪ ದೀಪ ಆರತಿ ಮಾಡಿದ್ದು ಕಾಶಿಯ ಗಂಗಾರತಿಯನ್ನು ನೆನಪಿಸುವಂತಿತ್ತಿತ್ತು. ಈ ಎಲ್ಲ ಕಾರ್ಯಕ್ರಮಗಳನ್ನು ಶ್ರೀಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 
ಬಳಿಕ ‘ಅಯೋಧ್ಯಾ ದರ್ಶನ’ ಕಿರುಚಿತ್ರ ನಡೆಯಿತು. ಭಾವೈಕ್ಯದ ಸಂಗಮವಾಗಿ ಕಬ್ಬಿನ ಹಾಲು ಹಬ್ಬ ನಡೆಯಿತು. ಸುಮಾರು 600 ಕ್ಕೂ ಅಧಿಕ ಜನರು ಸೇರಿ ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದ ರೂವಾರಿಗಳಾದ ಡಾ ನಿವೇದಿತಾ ಭಟ್ಟ ಹಾಗೂ ಡಾ. ನಾಗೇಶ ಭಟ್ಟ ಅವರು ಜ್ಯೋತಿರ್ವನದ ಪ್ರದೇಶವನ್ನು ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಂ ಟ್ರಸ್ಟ್‌ಗೆ ಹಸ್ತಾಂತರಿಸಿದರು.