ಚಾಕುವಿನಿಂದ ಕೊಯ್ದುಕೊಂಡ ವ್ಯಕ್ತಿ  
ಉತ್ತರ ಕನ್ನಡ

ಮದುವೆಯಾಗದ ಬೇಸರ : ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ:ವಯಸ್ಸಾದರೂ ಮದುವೆಯಾಗಿಲ್ಲ ಎಂಬ ವಿಚಾರವನ್ನು ಮನ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನರದ ಮಾರುತಿ ಗಲ್ಲಿಯಲ್ಲಿ ನಡೆದಿದೆ. 
ಪ್ರಜ್ಞೇಶ ಪ್ರಕಾಶ ಶೇಟ್(45) ಗಾಯಗೊಂಡವರು. ಸೋಮವಾರ ಬೆಳಗಿನಜಾವ ತಮ್ಮ ಕುತ್ತಿಗೆ, ಕೈ ಹಾಗೂ ಹೊಟ್ಟೆಯನ್ನು ಕೊಯ್ದುಕೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಕ್ರಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು. ಬಿಜೆಪಿ ಪದಾಽಕಾರಿಗಳು ಆಸ್ಪತ್ರೆಗೆ ತೆರಳಿದ್ದರು.