ಯಲ್ಲಾಪುರದ ವಿಶ್ವದರ್ಶನ ಸಮೂಹದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ ವಿದ್ಯಾರ್ಥಿಗಳು ಹುಬ್ಬಳ್ಳಿಯ ವರೂರಿನಲ್ಲಿರುವ ವಿಜಯವಾಣಿ ಪತ್ರಿಕೆಯ ಮುದ್ರಣಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಉಪನ್ಯಾಸಕರಾದ ವೆಂಕಟೇಶ ಗೇರಗದ್ದೆ, ಸ್ಫೂರ್ತಿ ಹೆಗಡೆ ಹಾಗೂ ವಿಜಯವಾಣಿ ಮುದ್ರಣಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
ಯಲ್ಲಾಪುರ: ಪ್ರಾಯೋಗಿಕ ಕಲಿಕೆಯ ಅಂಗವಾಗಿ ಪಟ್ಟಣದ ವಿಶ್ವದರ್ಶನ ಸಮೂಹದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ ವಿದ್ಯಾರ್ಥಿಗಳು ಹುಬ್ಬಳ್ಳಿಯ ವರೂರಿನಲ್ಲಿರುವ ವಿಜಯವಾಣಿ ಪತ್ರಿಕೆಯ ಮುದ್ರಣಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಮುದ್ರಣಾಲಯದ ಕಾರ್ಯವೈಖರಿ, ಯಂತ್ರಗಳು ಕಾರ್ಯನಿರ್ವಹಿಸುವ ಬಗೆ, ಪತ್ರಿಕೆಗಳ ಮುದ್ರಣಕ್ಕೆ ತಗುಲುವ ಖರ್ಚು ವೆಚ್ಚಗಳ ಕುರಿತಾಗಿ ವಿಜಯವಾಣಿ ಪತ್ರಿಕೆಯ ಮುದ್ರಣಾಲಯದ ಸಿಬ್ಬಂದಿಯಿಂದ ಹೊಸ ವಿಚಾರಗಳನ್ನು ಅರಿತುಕೊಂಡರು.
ಪತ್ರಿಕೆಯ ಮುದ್ರಣ ಹೇಗೆ ನಡೆಯುತ್ತದೆ? ಅಷ್ಟು ವೇಗವಾಗಿ ಲಕ್ಷಾಂತರ ಪ್ರತಿಗಳು ಹೇಗೆ ಮುದ್ರಣವಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವ ತವಕವಿತ್ತು. ವಿಜಯವಾಣಿ ಮುದ್ರಣಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಎಲ್ಲ ಕುತೂಹಲಗಳಿಗೆ ಉತ್ತರ ದೊರಕಿದೆ.
ಪತ್ರಿಕೆ ಹೇಗೆ ರೂಪುಗೊಂಡು ಓದುಗನ ಕೈಸೇರುತ್ತದೆ ಎನ್ನುವುದರ ಬಗ್ಗೆ ಬೋಧನೆಯ ವೇಳೆ ಎಷ್ಟೇ ಹೇಳಿದರೂ ಅದನ್ನು ಪ್ರತ್ಯಕ್ಷವಾಗಿ ನೋಡಿದಾಗ ಆಗುವ ಪ್ರಭಾವ ಹೆಚ್ಚಿರುತ್ತದೆ. ವಿದ್ಯಾರ್ಥಿಗಳು ಪತ್ರಿಕೆಯ ಮುದ್ರಣದ ಪ್ರತ್ಯಕ್ಷ ಅನುಭವವನ್ನು ಇಲ್ಲಿ ಪಡೆದಿದ್ದಾರೆ.