- ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು
- ಪೊಲೀಸರಿಂದ ಹುಡುಕಾಟ
: ಪಿಯುಸಿ ವಿದ್ಯಾರ್ಥಿಗಳಿಬ್ಬರು ಕಾಲೇಜ್‌ನಿಂದ ನಾಪತ್ತೆಯಾದ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
16 ವರ್ಷದ ಪೂನಂ ಜಿತೇಂದ್ರ ವೈಷ್ಣವ್ ಮತ್ತು 17 ವರ್ಷದ ಸಾಗರ ಬಿಷನುಪದ ಪೋರಿಯಾ ನಾಪತ್ತೆಯಾದವರು. ಕಾರವಾರ ನಂದನಗದ್ದಾದ ಪ್ರೀಮಿಯರ್ ಸೈನ್ಸ್ ಆ್ಯಂಡ್ ಕಾಮರ್ಸ್ ಪಿಯು ಕಾಲೇಜ್‌ನಲ್ಲಿ ದ್ವಿತೀಪ ಪಿಯುಸಿ ಕಾಮರ್ಸ್ ಓದುತ್ತಿದ್ದರು. ಕಾಮರ್ಸ್ ಓದುತ್ತಿದ್ದರು. ಕಾಲೇಜ್‌ಗೆ ಹೋದ ಇಬ್ಬರೂ ಜೂನ್ 24 ರಂದು ಕಾಣೆಯಾಗಿದ್ದಾರೆ.
ಹುಡುಗ ರಾಜಸ್ತಾನ ಮೂಲದವರಾಗಿದ್ದು, ಹುಡುಗಿ ಪಶ್ಚಿಮ ಬಂಗಾಳ ಮೂಲದವಳಾಗಿದ್ದಾಳೆ. ಇಬ್ಬರ ಪಾಲಕರು ಕಾರವಾರದಲ್ಲಿ ಬಂಗಾರದ ಆಭರಣ ತಯಾರಿಕೆ ಕೆಲಸದಲ್ಲಿ ನಿರತರಾಗಿದ್ದರು. ಅವರ ಹುಡುಕಾಟಕ್ಕಾಗಿ ಕಾರವಾರ ಪೊಲೀಸರು ದೆಹಲಿವರೆಗೆ ಹೋಗಿ ಬಂದಿದ್ದಾರೆ. ಆದರೂ ಪತ್ತೆಯಾಗಿಲ್ಲ.
ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಾರವಾರ ಮಹಿಳಾ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಸಂಪರ್ಕ ಮಾಡುವಂತೆ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರು ವಿನಂತಿಸಿದ್ದಾರೆ.
ಪೂನಮ್ ಜಿತೇಂದ್ರ ವೈಷ್ಣವ್ ಚಹರೆ:
ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, 5.6 ಅಡಿ ಎತ್ತರ, ಹಿಂದಿ, ರಾಜಸ್ತಾನಿ, ಕೊಂಕಣಿ, ಇಂಗ್ಲೀಷ್ ಮಾತನಾಡುತ್ತಾಳೆ. ಬಿಳಿ ಬಣ್ಣದ ಚೂಡಿದಾರ ಟಾಪ್ ಮತ್ತು ಬ್ಲೂ ಜೀನ್ಸ್ ಪ್ಯಾಂಟ್ ಧರಸಿರುತ್ತಾಳೆ.
ಸಾಗರ ಬಿಷನುಪದ ಪೋರಿಯಾ ಚಹರೆ:
ಇಂಗ್ಲೀಷ್ ಮಾತನಾಡುತ್ತಾನೆ, ಬೂದು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಸಿರುತ್ತಾನೆ.
ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಕಾರವಾರ ಪಿ.ಐ. ಮಹಿಳಾ ಠಾಣೆ ಮೊ.ಸಂ:8277987514, ಪಿಎಸೈ ಮಹಿಳಾ ಠಾಣೆ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.