ಯಲ್ಲಾಪುರ ತಾಲೂಕಿನ ಕರಡೊಳ್ಳಿಯಲ್ಲಿ ನೀರಿನ ಸಮಸ್ಯೆ (water problem)ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ವಿಜಯ ಮಿರಾಶಿ, ಲಕ್ಷ್ಮಣ ಕೋಕರೆ, ವಿನಾಯಕ ತಿನೇಕರ, ಪಾಂಡು ಸಿಂಧೆ, ಇತರರಿದ್ದರು.  
ಉತ್ತರ ಕನ್ನಡ

water problem - ಕರಡೊಳ್ಳಿ ಗ್ರಾಮದಲ್ಲಿ ನೀರಿಗಾಗಿ ಪರದಾಟ

ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಗ್ರಾಮಸ್ಥರು ನೀರಿಗಾಗಿ (water problem)ಪರದಾಡುವಂತಾಗಿದೆ. 
  ಕರಡೊಳ್ಳಿ ಗ್ರಾಮದಲ್ಲಿ 60 ರಿಂದ 70 ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮದಲ್ಲಿ ನೀರಿಗೆ ಆಸರೆಯಾಗಿದ್ದ ಏಕೈಕ ಕೊಳವೆ ಬಾವಿಯಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಗ್ರಾಮಸ್ಥರ ನಿತ್ಯದ ಬಳಕೆಗೆ ಹಾಗೂ ಜಾನುವಾರುಗಳಿಗೆ ನೀರು ದೊರಕದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. 
ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಶಾಸಕ ಶಿವರಾಮ್ ಹೆಬ್ಬಾರ ಅವರ ಕಚೇರಿಯಲ್ಲಿ ಗ್ರಾಮಸ್ಥರು ಹಾಗೂ ಯುವ ಮುಖಂಡರು ಮನವಿ ಸಲ್ಲಿಸಿದ್ದಾರೆ. 
  ಕರಡೊಳ್ಳಿ ಗ್ರಾಮಕ್ಕೆ ಹೊಸದೊಂದು ಕೊಳವೆ ಬಾವಿಯನ್ನು (ಬೋರ್‌ವೆಲ್) ಮಂಜೂರು ಮಾಡಿ, ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಡಬೇಕಾಗಿ ಶಾಸಕರಲ್ಲಿ ಆಗ್ರಹಿಸಿದ್ದಾರೆ. 
ಯುವ ಮುಖಂಡ ವಿವೇಕ ಹೆಬ್ಬಾರ ಅವರು ಸ್ಪಂದಿಸಿ, ಶಾಸಕರ ಮೂಲಕ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಸೇನೆಯ ರಾಜ್ಯ ಖಜಾಂಚಿ ಲಕ್ಷ್ಮಣ ಕೋಕರೆ, ಸ್ಥಳೀಯರಾದ ವಿನಾಯಕ ತಿನೇಕರ, ಪಾಂಡು ಸಿಂಧೆ, ಶ್ಯಾಮ್ ಸಿಂಧೆ, ವಿಷ್ಣು ಕೋಕರೆ, ದೊಂಡು ಕೋಕರೆ, ವಿಶ್ವನಾಥ ಪಟಾಕಾರೆ ಇತರರು ಉಪಸ್ಥಿತರಿದ್ದರು.