ಕತ್ತೆ ಕಿರುಬ (Striped Hyena) 
ಉತ್ತರ ಕನ್ನಡ

Striped Hyena ಪಶ್ಚಿಮಘಟ್ಟದಲ್ಲಿ ಪ್ರತ್ಯಕ್ಷವಾದ ಕತ್ತೆಕಿರುಬ

ಜೊಯಿಡಾ:  ಬಯಲುಸಿಮೆಯಂಥ ಒಣ, ಶುಷ್ಕ ಪ್ರದೇಶದಲ್ಲಿ  ಹೆಚ್ಚು ಕಣ್ಣಿಗೆ ಬೀಳುವ ಕತ್ತೆ ಕಿರುಬ (Striped Hyena)  ಪ್ರಾಣಿ ಪಶ್ಚಿಮಘಟ್ಟದ ಜೊಯಿಡಾ ಕಾಡಿನಲ್ಲಿ ಸ್ಥಳಿಯರ ಮೊಬೈಲ್ ಕ್ಯಾಮೆರಾಕ್ಕೆಸೆರೆ ಸಿಕ್ಕಿದೆ.
ಗಣೇಶಗುಡಿ ಕಾಳಿ ಸೇತುವೆಯ ಬಳಿ ರಾತ್ರಿ ವೇಳೆ ಕತ್ತೆಕಿರುಬ ರಸ್ತೆಯಲ್ಲಿ ಹಾದು ಹೊಗುತ್ತಿರುವಾಗ ಸ್ಥಳಿಯರು ವಿಡಿಯೋ ಮಾಡಿದ್ದಾರೆ.
ತಿಂಗಳ ಹಿಂದೆಯೂ ಸಹ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಅಂಬಿಕಾನಗರದಲ್ಲಿ ಸ್ಥಳಿಯರ ಕಣ್ಣಿಗೆ ಕಾಣಿಸಿತ್ತು ಎನ್ನಲಾಗುತ್ತಿದೆ. 
 ಈಗ ಕಳೆದ ಒಂದು ವಾರದ ಹಿಂದೆ ಗಣೇಶಗುಡಿ ಸುಪಾ ಜಲಾಶಯದ ಪಕ್ಕದ ಕಾಳಿ ಸೇತುವೆ ಬಳಿ ಕಾರಿನಲ್ಲಿ ಹೊಗುತ್ತಿರುವ ವ್ಯಕ್ತಿಯೊಬ್ಬರಿಗೆ ಕಾಣ ಸಿಕ್ಕಿದೆ.
ಈ ಕತ್ತೆಕಿರುಬ ಹೆಚ್ಚಾಗಿ ಧಾರವಾಡ ಮತ್ತು ಕಿತ್ತೂರು ಭಾಗದಲ್ಲಿ ಕಾಣಸಿಗುತ್ತದೆ. ಆಡು,ಕುರಿ, ಕೃಷ್ಣ ಮೃಗದಂತ ಕಾಡು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತದೆ. 
ಹೆಚ್ಚಾಗಿ ಸತ್ತಿರುವ ಪ್ರಾಣಿಗಳನ್ನು ತಿನ್ನುವ ಇವು ಗುಂಪಿನಲ್ಲಿ ಹೆಚ್ಚಾಗಿ ವಾಸಿಸುವ ಹಾಗೂ ಬೇಟೆಯಾಡುವ ಪ್ರಾಣಿಯಾಗಿದೆ.
ಜತೆಗೆ ಪ್ರವಾಸಿಗರು ಬರುವ  ಮತ್ತು ರೆಸಾರ್ಟ್, ಹೋಂ ಸ್ಟೇಗಳಿಂದ ತುಂಬಿರುವ ಗಣೇಶಗುಡಿಯ ಇಳವಾ ಪ್ರದೇಶದಲ್ಲಿ ಹೆಚ್ಚಾಗಿ ಜನರ ಕಣ್ಣಿಗೆ ಬಿಳುತ್ತಿದೆ. 
ನಾಯಿಗಳ ಹಾಗೆ ಯಾವುದೆ ಆಹಾರಕ್ಕೆ ಈ ಪ್ರಾಣಿ ಹೊಂದಿಕೊಳ್ಳುವ ಕಾರಣ ರೆಸಾರ್ಟ್‌ಗಳಿಂದ  ಇಲ್ಲಿ ಎಸೆಯುವ ಮಾಂಸ ತ್ಯಾಜ್ಯಗಳನ್ನು ತಿಂದು ಇಲ್ಲಿ ಬದುಕುತ್ತಿರಬಹುದು ಎನ್ನುವುದು ಸದ್ಯದ ಅನುಮಾನ. 

ಭಯಪಡಬೇಕಾಗಿಲ್ಲ

ಕಳೆದ ಕೆಲ ವರ್ಷಗಳ ಹಿಂದೆಬಂಡಿಪುರ ಅರಣ್ಯ ಪ್ರದೇಶಗಳಲ್ಲಿ  ಕತ್ತೆ ಕಿರುಬ ಎನ್.ಜಿ.ಓ ಒಂದರ ತಂಡದ ಕ್ಯಾಮರಾ ಟ್ರಾಪಿನಲ್ಲಿ ಸಿಕ್ಕಿದೆ. 
ನಿಶಾಚರಿಯಾದ ಈ ಪ್ರಾಣಿಯಿಂದ ಇಲ್ಲಿಯವರೆಗೆ  ಯಾವುದೇ ಜೀವ ಹಾನಿ ಮತ್ತು ಮಾನವನ ಮೇಲಿನ ದಾಳಿಯ ಉದಾಹರಣೆ ಇಲ್ಲ. 
ಇದರಿಂದ ಭಯ ಪಡಬೇಕಾದ ಯಾವುದೇ ಅಗತ್ಯವಿಲ್ಲ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಭಿಪ್ರಾಯವಾಗಿದೆ.