ಶಿರಸಿಯ ದಾನಕೊಪ್ಪದಲ್ಲಿ ರೈತರು ಪ್ರತಿಭಟನೆ ನಡೆಸಿದರು. 
ಉತ್ತರ ಕನ್ನಡ

ಬೆಳೆ ವಿಮೆ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ

ಸುಭಾಸ ಹೆಗಡೆ ಧೂಪದಹೊಂಡ
ಶಿರಸಿ: ಬೆಳೆ ವಿಮೆ ಪಾವತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಽಕಾರಿಗಳು ತಾಲೂಕಿನ ದಾಸನಕೊಪ್ಪದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾತನಾಡಿ, ಮಳೆ ಮಾಪನ ಯಂತ್ರ ಸರಿ ಇಲ್ಲದ ನೆಪ ಹೇಳಿ ಬೆಳೆ ವಿಮೆಯ ಪರಿಹಾರವನ್ನು ಎರಡು ವರ್ಷದಿಂದ ಸರಿಯಾಗಿ ನೀಡಿಲ್ಲ. ಕಳೆದ ವರ್ಷ ಸಾಕಷ್ಟು ಹೋರಾಟದ ಬಳಿಕ ಕನಿಷ್ಠ ಹಣ ಜಮಾ ಮಾಡಲಾಯಿತು. ಈ ಬಾರಿ ಇದುವರೆಗೂ ನೀಡಿಲ್ಲ. ರೈತರು ಕಂತು ಕಟ್ಟಲು ದಿನ ನಿಗದಿ ಮಾಡಲಾಗುತ್ತದೆ. ಆದರೆ, ಪರಿಹಾರ ನೀಡಲು ಮಾತ್ರ ಯಾವುದೇ ದಿನಾಂಕದ ಮಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶೀಘ್ರ ವಿಮಾ ಹಣ ಜಮಾ ಮಾಡದೇ ಇದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಸತೀಶ ನಾಯ್ಕ ಮಾತನಾಡಿ,ರೈತರ ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ 3 ಫೇಸ್‌ಬು ವಿದ್ಯುತ್ ಪೂರೈಕೆ ಮಾಡಬೇಕು. ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆ ಕೊನೆಯ ದಿನಾಂಕವನ್ನು ಕನಿಷ್ಠ ಆರು ತಿಂಗಳು ಮುಂದೂಡಬೇಕು. ಗೋವಿನಜೋಳ ಖರೀದಿ ಕೇಂದ್ರವನ್ನು ಸರ್ಕಾರದ ಆದೇಶದಂತೆ ದಾಸನ ಕೊಪ್ಪದಲ್ಲಿ ತಕ್ಷಣದಿಂದಲೇ ತೆರೆಯಬೇಕು.ಅತಿವೃಷ್ಟಿ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕು.ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಹೊಸ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಶಿರಸಿ ಎಸಿ ಚಂದ್ರಶೇಖರ್ ಪ್ರತಿಭಟನಾ ಕಾರದೊಂದಿಗೆ ಮಾತನಾಡಿ, ಸದ್ಯದಲ್ಲೇ ವಿವಿಧ ಇಲಾಖೆಗಳ ಅಕಾರಿಗಳು ಹಾಗೂ ರೈತರ ಸಭೆಯನ್ನು ಕರೆಯುತ್ತೇವೆ.ಅಲ್ಲಿ ಸಮಸ್ಯೆ ಗಳ ಕುರಿತು ಚರ್ಚೆ ನಡೆಸುತ್ತೇವೆ ಎಂದರು. ಸಂಘಟನೆಯ ಪ್ರಮುಖರಾದ ಪ್ರಮೋದ ಜಕ್ಕಣ್ಣನವರ್ , ನಾಗರಾಜ, ನವೀನ, ಶಶಿಕುಮಾರ, ದೀಪಕ್ , ಜಯಪುತ್ರ ಪ್ರತಿಭಟನೆಯಲ್ಲಿದ್ದರು. ಡಿವೈಎಸ್‌ಪಿ ಗೀತಾ ಪಾಟೀಲ್ ಆಗಮಿಸಿ ಭದ್ರತೆ ಜವಾಬ್ದಾರಿ ನೋಡಿಕೊಂಡರು.

ಶಿರಸಿ-ಹಾವೇರಿ ರಸ್ತೆ ಸರಿಪಡಿಸಿ

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ ಸಾಕಷ್ಟು ವರ್ಷಗಳು ಕಳೆದರೂ ಪೂರ್ಣವಾಗಿಲ್ಲ. ಓಡಾಟ ಕಷ್ಟ ಸಾಧ್ಯವಾಗಿದೆ. ಅಪಘಾತಗಳು ಸಂಭವಿಸುತ್ತಿವೆ. ಗುತ್ತಿಗೆದಾರರನ್ನು ಕಪು÷್ಪ ಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮೇ ಅಂತ್ಯದ ಒಳಗೆ ಕಾಮಗಾರಿ ಮುಗಿಸಿ ಸಂಚಾರ ಮುಕ್ತ ಮಾಡದೇ ಇದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.