ಶಿರಸಿಯಲ್ಲಿ ಬಿಜೆಪಿ ಮಹಿಳಾ ಮಂಡಲದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಮಾತನಾಡಿದರು. Government 
ಉತ್ತರ ಕನ್ನಡ

ಅಭಿವೃದ್ಧಿಗೆ ಆಸಕ್ತಿ ತೋರದ ರಾಜ್ಯ ಸರ್ಕಾರ government

ವಿನಯ ಹೆಗಡೆ
ಶಿರಸಿ: ಮಹಿಳೆಯರಿಗೆ ಉಚಿತ ಸೌಲಭ್ಯ, ಪ್ರತಿ ತಿಂಗಳು ಎರಡು ಸಾವಿರ ರೂ. ಹಣ ಎಂದು ನಂಬಿಸಿರುವ ರಾಜ್ಯ ಸರ್ಕಾರ (government) ಅದೇ ಮಹಿಳೆಯ ಅರ್ಧ ಆದ ಮನೆ ಪೂರ್ಣಗೊಳಿಸಿಕೊಳ್ಳಲು ಹಣ ಬಿಡುಗಡೆಗೊಳಿಸುತ್ತಿಲ್ಲ.
ರಾಜ್ಯ ಸರ್ಕಾರ‌್ಕಕೆ ಮಹಿಳಾ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇಲ್ಲ ಎಂದು ಬಿಜೆಪಿ ಮಹಿಳಾ ಮಂಡಳದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಮೋರ್ಚಾ ಕಾರ್ಯಕಾರಿಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳು, ಹಾಸ್ಟೆಲ್‌ಗಳಲ್ಲಿ ಬಾಲಕಿಯರು ಗರ್ಭಿಣಿ ಆಗುವ ಪ್ರಮಾಣ ಜಾಸ್ತಿ ಆಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಕ್ಷ್ಯವಿಲ್ಲ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕುಹಕದ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಸಮಯ ಸಿಗುತ್ತದೆ. ಮಹಿಳೆಯರ ಸಮಸ್ಯೆಬಗ್ಗೆ ಕ್ರಮ ಕೈಗೊಳ್ಳಲು ಸಮಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಸಾವಿರಾರು ರಾಷ್ಟ್ರ ಭಕ್ತರನ್ನು ದಮನಮಾಡಿ ತಮ್ಮ ಇತಿಹಾಸ ಬರೆದ ಕಾಂಗ್ರೆಸ್, ವಂದೇ ಮಾತರಂ ಅನ್ನು ಸಹ ತುಂಡರಿಸಿದೆ. ದೇಶಗಳನ್ನು ಸೋಲಿಸುವ ವಿದೇಶ ಶಕ್ತಿಗಳ ಬಗ್ಗೆ ಅನುಕಂಪ ಹೊಂದಿದ ಕಾಂಗ್ರೆಸ್‌ನಿಂದ ನಾವು ಪಾಠ ಕಲಿಯಬೇಕಿಲ್ಲ.
ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಸಹ ಕಾಣೆಯಾಗುವ ಹೆಣ್ಣು ಮಕ್ಕಳ ಬಗ್ಗೆ ಎಫ್‌ಐಆರ್ ಏಕೆ ಆಗ್ತಿಲ್ಲ ? ಈ ಬಗ್ಗೆ ಸ್ಥಳೀಯ ಶಾಸಕರು ಉತ್ತರಿಸಬೇಕು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತೇ ಹೋಗಿದೆ. ನಗರ ಪ್ರದೇಶದಲ್ಲಿ ಅವಘಡಗಳನ್ನು ತಡೆಯುವ ಸಲುವಾಗಿ ಸಿಸಿ ಟಿವಿ ಹಾಕಲೂ ಹಣ ಇರದ ಕೆಟ್ಟ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆ.
ಪುಂಡರಿಗೆ ಧೈರ್ಯ ತುಂಬುವ ಮಾತುಗಳನ್ನೇ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಹೇಳುತ್ತಿರುವುದು ದುರಂತ ಎಂದರು.
ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರ ಪರಿಸ್ಥಿತಿ ಅತ್ಯಂತ ಕೆಳಮಟ್ಟಕ್ಕೆ ಬಂದಿದೆ.
ಅವರಿಗೆ ನೀಡಲಾಗುತ್ತಿರುವ ಯೋಜನೆಗಳನ್ನೂ ಸ್ಥಗಿತಗೊಳಿಸಿದ್ದು, ವಿರೋಧ ಪಕ್ಷವಾಗಿ ನಾವು ಬೀದಿಗಿಳಿದು ರೈತರ ಪರವಾಗಿ ಹೋರಾಡುತ್ತಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ನಿಲ್ಲಿಸಿ ರಾಜಕೀಯ ಹಗೆತನ ಮಾಡುತ್ತಿದೆ.
ಇನ್ನೊಂದೆಡೆ ಲವ್ ಜಿಹಾದ್ ಪ್ರಕರಣಗಳೂ ಜಾಸ್ತಿಯಾಗಿದ್ದು, ತಡೆಗೆ ನಮ್ಮ ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದರು.
ಶೋಭಾ ಗೌಡರ್, ರೇಖಾ ಹೆಗಡೆ, ಉಷಾ ಹೆಗಡೆ, ಸುಜಾತಾ, ಅನಸೂಯಾ ಹೆಗಡೆ, ಶಿಲ್ಪಾ ಭಾಸ್ಕರ್, ಗುರುಪ್ರಸಾದ ಹರ್ತೆಬೈಲ್ ಇತರರಿದ್ದರು.